Hadith for the World
Tap the image to view it full size
ಅಕೀದಾ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 55 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ಸತ್ಯವಿಶ್ವಾಸಿ ದಾಸ ಮತ್ತು ದಾಸಿಯರಿಗೆ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ. ಅದು ಸ್ವತಃ ಅವರಲ್ಲೇ ಆಗಿರಬಹುದು, ಅಂದರೆ ಅವರ ಆರೋಗ್ಯ ಅಥವಾ ದೇಹದಲ್ಲಾಗಿರಬಹುದು. ಅವರ ಮಕ್ಕಳಲ್ಲಾಗಿರಬಹುದು, ಅಂದರೆ ಮಕ್ಕಳ ಅನಾರೋಗ್ಯ, ಸಾವು, ಅವಿಧೇಯತೆ ಮುಂತಾದವುಗಳಲ್ಲಿ ಆಗಿರಬಹುದು. ಅವರ ಸಂಪತ್ತಿನಲ್ಲಾಗಿರಬಹುದು, ಅಂದರೆ ಬಡತನ, ವ್ಯಾಪಾರ ನಷ್ಟ, ಕಳ್ಳತನ, ಜೀವನದ ಜಂಜಾಟ ಮತ್ತು ಇಕ್ಕಟ್ಟು ಮುಂತಾದವುಗಳಲ್ಲಿ ಆಗಿರಬಹುದು. ಇವು ಎಲ್ಲಿಯವರೆಗೆ ಸಂಭವಿಸುತ್ತವೆಯೆಂದರೆ, ಅಲ್ಲಾಹು ಆ ಪರೀಕ್ಷೆಗಳ ಮೂಲಕ ಅವರ ಎಲ್ಲಾ ಪಾಪಗಳನ್ನು ಅಳಿಸಿ, ಅವರು ತಮ್ಮ ಎಲ್ಲಾ ಪಾಪ-ದೋಷಗಳಿಂದ ಶುದ್ಧರಾಗಿ ಅಲ್ಲಾಹನನ್ನು ಭೇಟಿಯಾಗುವ ತನಕ.

Source
رواه الترمذي وأحمد
Download image

Saved at original quality