Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಉಮಾಮ ರಿಂದ ವರದಿ. ಅವರು ಹೇಳಿದರು: ಅಮ್ರ್ ಬಿನ್ ಅಬಸ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ತಿಳಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು:

Available in 55 languages
«ಅಬೂ ಉಮಾಮ ರಿಂದ ವರದಿ. ಅವರು ಹೇಳಿದರು: ಅಮ್ರ್ ಬಿನ್ ಅಬಸ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ತಿಳಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ. ಆದ್ದರಿಂದ ಆ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸುವವರಲ್ಲಿ ಸೇರಲು ನಿನಗೆ ಸಾಧ್ಯವಾಗುವುದಾದರೆ ಸೇರಿಕೋ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಪರಿಪಾಲಕನು (ಅಲ್ಲಾಹು) ದಾಸನಿಗೆ ಅತ್ಯಂತ ಹತ್ತಿರವಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ. ಆದ್ದರಿಂದ ಓ ಸತ್ಯವಿಶ್ವಾಸಿಗಳೇ, ಆ ಸಮಯದಲ್ಲಿ ಅಲ್ಲಾಹನನ್ನು ಆರಾಧಿಸುವವರು, ನಮಾಝ್ ಮಾಡುವವರು, ಸ್ಮರಿಸುವವರು, ಪಶ್ಚಾತ್ತಾಪಪಡುವವರು ಮುಂತಾದವರೊಡನೆ ಸೇರಿಕೊಳ್ಳುವ ಭಾಗ್ಯ ಮತ್ತು ಸಾಮರ್ಥ್ಯ ನಿನಗೆ ದೊರಕಿದರೆ ಅವರೊಡನೆ ಸೇರಿಕೋ. ಏಕೆಂದರೆ ಅದು ಅತ್ಯಗತ್ಯವಾಗಿ ಸದುಪಯೋಗಪಡಿಸಬೇಕಾದ ಮತ್ತು ಪರಿಶ್ರಮಪಡಬೇಕಾದ ಸಮಯವಾಗಿದೆ.

Source
رواه أبو داود والترمذي والنسائي
Download image

Saved at original quality