Hadith for the World
Tap the image to view it full size
ಜೀವನಚರಿತ್ರೆ ಮತ್ತು ಇತಿಹಾಸ

ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

Available in 39 languages
«ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ನಾವು ಗುಹೆಯಲ್ಲಿದ್ದಾಗ (ಹಿಜ್ರದ ಸಂದರ್ಭದಲ್ಲಿ), ಬಹುದೇವಾರಾಧಕರ ಪಾದಗಳು ನಮ್ಮ ತಲೆಗಳ ಮೇಲ್ಭಾಗದಲ್ಲಿರುವುದನ್ನು ನಾನು ನೋಡಿದೆನು. ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಅವರಲ್ಲೊಬ್ಬನು ತನ್ನ ಪಾದಗಳ ಕಡೆಗೆ ನೋಡಿದರೆ, ಅವನು ನಮ್ಮನ್ನು ತನ್ನ ಪಾದಗಳ ಕೆಳಭಾಗದಲ್ಲಿ ಕಾಣುವನು". ಆಗ ಅವರು (ಪ್ರವಾದಿ) ಹೇಳಿದರು: "ಓ ಅಬೂ ಬಕರ್, ಅಲ್ಲಾಹು ಅವರ ಮೂರನೆಯವನಾಗಿರುವ ಇಬ್ಬರ ಬಗ್ಗೆ ನಿನ್ನ ಭಾವನೆ ಏನು?"»

Meaning translation ·

Explanation

The meaning in a few plain lines

ಸತ್ಯವಿಶ್ವಾಸಿಗಳ ಸರದಾರರಾದ ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಹಿಜ್ರದ ಸಮಯದಲ್ಲಿ ಹೇಳಿದರು: ಬಹುದೇವಾರಾಧಕರು ನಮ್ಮ ಮೇಲ್ಭಾಗದಲ್ಲಿ, 'ಸೌರ್' ಗುಹೆಯ ಮೇಲೆ ನಿಂತಿದ್ದರು, ಮತ್ತು ನಾವು ಗುಹೆಯ ಒಳಗಿದ್ದೆವು. ಆಗ ನಾನು ಅವರ ಪಾದಗಳನ್ನು ನೋಡಿದೆನು. ನಾನು ಹೇಳಿದೆನು: ಓ ಅಲ್ಲಾಹನ ಸಂದೇಶವಾಹಕರೇ, ಅವರಲ್ಲೊಬ್ಬನು ತನ್ನ ಪಾದಗಳ ಕಡೆಗೆ ನೋಡಿದರೆ, ಅವನು ನಮ್ಮನ್ನು ತನ್ನ ಪಾದಗಳ ಕೆಳಭಾಗದಲ್ಲಿ ಕಾಣುವನು. ಆಗ ಅವರು (ಪ್ರವಾದಿ) ಹೇಳಿದರು: ಓ ಅಬೂ ಬಕರ್, ವಿಜಯ, ಸಹಾಯ, ರಕ್ಷಣೆ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಅಲ್ಲಾಹು ಮೂರನೆಯವನಾಗಿರುವ ಇಬ್ಬರ ಬಗ್ಗೆ ನಿನ್ನ ಭಾವನೆಯೇನು?!

Source
متفق عليه
Download image

Saved at original quality