Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 54 languages
«ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತವೆ, ಮತ್ತು ಕೆಟ್ಟ ಕನಸುಗಳು ಶೈತಾನನಿಂದ ಬರುತ್ತವೆ. ನಿಮ್ಮಲ್ಲಿ ಯಾರಾದರೂ ತಾವು ಇಷ್ಟಪಡದ ಕೆಟ್ಟ ಕನಸನ್ನು ಕಂಡರೆ, ಅವರು ತಮ್ಮ ಎಡಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಏಕೆಂದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಳ್ಳೆಯ ಮತ್ತು ಸಂತೋಷದಾಯಕ ಕನಸು ಅಲ್ಲಾಹನಿಂದಾಗಿದೆ. ಕೆಟ್ಟ ಕನಸುಗಳು, ಅಂದರೆ ಒಬ್ಬರು ಇಷ್ಟಪಡದ ಮತ್ತು ಅವರಿಗೆ ದುಃಖವನ್ನುಂಟುಮಾಡುವ ಕನಸುಗಳು ಶೈತಾನನಿಂದ ಬರುತ್ತವೆ. ಆದ್ದರಿಂದ, ಯಾರಾದರೂ ತಾವು ಇಷ್ಟಪಡದ ಕನಸನ್ನು ಕಂಡರೆ, ಅವರು ತಮ್ಮ ಎಡಭಾಗಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಹೀಗೆ ಮಾಡಿದರೆ ಅದು ಅವನಿಗೆ ಹಾನಿ ಮಾಡುವುದಿಲ್ಲ. ಅಲ್ಲಾಹು ಈ ವಿಷಯವನ್ನು ಕನಸಿನಿಂದ ಉಂಟಾಗುವ ದುಷ್ಪರಿಣಾಮಕ್ಕೆ ಸುರಕ್ಷತೆಯಾಗಿ ಮಾಡಿದ್ದಾನೆ.

Source
متفق عليه
Download image

Saved at original quality