ಸದ್ಗುಣಗಳು ಮತ್ತು ನಡವಳಿಕೆಗಳು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
Available in 70 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ. ನಿನಗೆ ಇಷ್ಟವಿರುವುದನ್ನು ಮಾಡು. ನಾನಂತೂ ನಿನ್ನನ್ನು ಕ್ಷಮಿಸಿದ್ದೇನೆ."»Meaning translation ·
Saved at original quality








