Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಸಅದ್ ಬಿನ್ ಅಬೂ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

Available in 66 languages
«ಸಅದ್ ಬಿನ್ ಅಬೂ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳ, ಸ್ವಾವಲಂಬಿಯಾದ ಮತ್ತು ಗಮನ ಸೆಳೆಯಲು ಬಯಸದ ದಾಸನನ್ನು ಪ್ರೀತಿಸುತ್ತಾನೆ."»

Meaning translation ·

Explanation

The meaning in a few plain lines

ಸರ್ವಶಕ್ತನಾದ ಅಲ್ಲಾಹು ತನ್ನ ಕೆಲವು ದಾಸರನ್ನು ಪ್ರೀತಿಸುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ ಅವನು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ: ದೇವಭಯವುಳ್ಳವರು ಎಂದರೆ ಅವನ ಆಜ್ಞೆಗಳನ್ನು ಪಾಲಿಸುವವರು ಮತ್ತು ಅವನು ವಿರೋಧಿಸಿದ ವಿಷಯಗಳಿಂದ ದೂರ ಸರಿಯುವವರು. ಅವನು ಸ್ವಾವಲಂಬಿಯನ್ನು ಪ್ರೀತಿಸುತ್ತಾನೆ: ಸ್ವಾವಲಂಬಿ ಎಂದರೆ ಜನರನ್ನು ಅವಲಂಬಿಸದೆ ಕೇವಲ ಅಲ್ಲಾಹನನ್ನು ಮಾತ್ರ ಅವಲಂಬಿಸಿ, ಅಗತ್ಯಕ್ಕಾಗಿ ಅವನ ಹೊರತು ಇತರ ಯಾರ ಕಡೆಗೂ ತಿರುಗದವನು. ಅವನು ಗಮನ ಸೆಳೆಯಲು ಬಯಸದವನನ್ನು ಪ್ರೀತಿಸುತ್ತಾನೆ: ಗಮನ ಸೆಳೆಯಲು ಬಯಸದವನು ಎಂದರೆ ವಿನಮ್ರನು, ಅಲ್ಲಾಹನನ್ನು ಆರಾಧಿಸುವವನು, ತನಗೆ ಪ್ರಯೋಜನ ನೀಡುವ ಕಾರ್ಯಗಳನ್ನು ಮಾತ್ರ ಮಾಡುವವನು, ಇತರರು ತನ್ನನ್ನು ಗುರುತಿಸಬೇಕು, ಪ್ರಶಂಸಿಸಬೇಕು ಮತ್ತು ತನ್ನ ಬಗ್ಗೆ ಮಾತನಾಡಬೇಕು ಎಂದು ಬಯಸದವನು.

Source
رواه مسلم
Download image

Saved at original quality