ಸದ್ಗುಣಗಳು ಮತ್ತು ನಡವಳಿಕೆಗಳು
ಅಬ್ದುಲ್ಲಾ ಬಿನ್ ಖುಬೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
Available in 60 languages
«ಅಬ್ದುಲ್ಲಾ ಬಿನ್ ಖುಬೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಮಳೆ ಮತ್ತು ತೀವ್ರ ಕತ್ತಲೆಯ ರಾತ್ರಿ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗಾಗಿ ನಮಾಝ್ ಮಾಡಲು ಹುಡುಕುತ್ತಾ ಹೊರಟೆವು. ನಾನು ಅವರನ್ನು ಕಂಡಾಗ, ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ನಂತರ ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ಅವರು ಹೇಳಿದರು: “ಹೇಳು.” ನಾನು ಕೇಳಿದೆ: "ನಾನು ಏನು ಹೇಳಬೇಕು?" ಅವರು ಹೇಳಿದರು: ಸಂಜೆಯಾಗುವಾಗ ಮತ್ತು ಬೆಳಗಾಗುವಾಗ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಮತ್ತು ರಕ್ಷೆ ಬೇಡುವ ಎರಡು ಸೂರಗಳನ್ನು (ಸೂರ ಫಲಕ್ ಮತ್ತು ಸೂರ ನಾಸ್) ಮೂರು ಬಾರಿ ಪಠಿಸು. ಅದು ನಿನಗೆ ಎಲ್ಲದ್ದಕ್ಕೂ ಸಾಕಾಗುತ್ತದೆ."»Meaning translation ·
Saved at original quality








