ಪವಿತ್ರ ಕುರ್ ಆನ್ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ವಿಷಯಗಳು
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 60 languages
«ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನ್ ಪಠಿಸುವ ಸತ್ಯವಿಶ್ವಾಸಿಯನ್ನು ಮಾದಳ ಹಣ್ಣಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ ಮತ್ತು ರುಚಿ ಉತ್ತಮವಾಗಿದೆ. ಕುರ್‌ಆನ್ ಪಠಿಸದ ಸತ್ಯವಿಶ್ವಾಸಿಯನ್ನು ಖರ್ಜೂರಕ್ಕೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ, ಆದರೆ ಅದರ ರುಚಿ ಸಿಹಿಯಾಗಿದೆ. ಕುರ್‌ಆನ್ ಪಠಿಸುವ ಕಪಟವಿಶ್ವಾಸಿಯನ್ನು ತುಳಸಿಗೆ ಹೋಲಿಸಬಹುದು. ಅದರ ಸುವಾಸನೆ ಆಹ್ಲಾದಕರವಾಗಿದೆ, ಆದರೆ ರುಚಿ ಕಹಿಯಾಗಿದೆ. ಕುರ್‌ಆನ್ ಪಠಿಸದ ಕಪಟವಿಶ್ವಾಸಿಯನ್ನು ಹಾವುಮೆಕ್ಕೆ ಕಾಯಿಗೆ ಹೋಲಿಸಬಹುದು. ಅದಕ್ಕೆ ಸುವಾಸನೆಯಿಲ್ಲ ಮತ್ತು ರುಚಿ ಕೂಡ ಕಹಿಯಾಗಿದೆ."»Meaning translation ·
Saved at original quality








