ಅಕೀದಾ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
Available in 65 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹೇಳಿದನು: ನನ್ನ ಮಿತ್ರರ ಮೇಲೆ ದ್ವೇಷ ತೋರುವವನು ಯಾರೋ ಅವನ ವಿರುದ್ಧ ನಾನು ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನಿಗೆ ಕಡ್ಡಾಯಗೊಳಿಸಿದ ಕರ್ಮಗಳ ಮೂಲಕವಲ್ಲದೆ ನಾನು ಇಷ್ಟಪಡುವ ಇತರ ಯಾವುದರ ಮೂಲಕವೂ ಅವನು ನನಗೆ ಹತ್ತಿರವಾಗುವುದಿಲ್ಲ. ನನ್ನ ದಾಸನು ಹೆಚ್ಚುವರಿ ಕರ್ಮಗಳನ್ನು (ಐಚ್ಛಿಕ ಕರ್ಮಗಳನ್ನು) ಮಾಡುವ ಮೂಲಕ ನನಗೆ ಹತ್ತಿರವಾಗುತ್ತಲೇ ಇರುತ್ತಾನೆ, ಎಲ್ಲಿಯವರೆಗೆಂದರೆ ನಾನು ಅವನನ್ನು ಪ್ರೀತಿಸುವ ತನಕ. ನಾನು ಅವನನ್ನು ಪ್ರೀತಿಸಿದರೆ, ಅವನು ಕೇಳುವ ಅವನ ಶ್ರವಣ ನಾನಾಗುತ್ತೇನೆ, ಅವನು ನೋಡುವ ಅವನ ದೃಷ್ಟಿ ನಾನಾಗುತ್ತೇನೆ, ಅವನು ಹಿಡಿಯುವ ಅವನ ಕೈ ನಾನಾಗುತ್ತೇನೆ ಮತ್ತು ಅವನು ನಡೆಯುವ ಅವನ ಕಾಲು ನಾನಾಗುತ್ತೇನೆ. ಅವನು ನನ್ನಲ್ಲಿ ಏನಾದರೂ ಕೇಳಿದರೆ ನಾನು ಅದನ್ನು ಖಂಡಿತ ಕೊಡುತ್ತೇನೆ. ಅವನು ನನ್ನಲ್ಲಿ ರಕ್ಷೆ ಬೇಡಿದರೆ ನಾನು ಖಂಡಿತ ಅವನಿಗೆ ರಕ್ಷೆ ನೀಡುತ್ತೇನೆ. ನನ್ನ ದಾಸನ ಆತ್ಮವನ್ನು ವಶಪಡಿಸಲು ನಾನು ಹಿಂಜರಿಯುವಂತೆ, ನಾನು ಮಾಡುವ ಇತರ ಯಾವುದರ ಬಗ್ಗೆಯೂ ನಾನು ಹಿಂಜರಿಯುವುದಿಲ್ಲ. ಏಕೆಂದರೆ, ಅವನು ಮರಣವನ್ನು ಇಷ್ಟಪಡುವುದಿಲ್ಲ ಮತ್ತು ಅವನನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ."»Meaning translation ·
Saved at original quality








