Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

Available in 37 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ವೃದ್ಧನ ಹೃದಯವು ಎರಡು ವಿಷಯಗಳಲ್ಲಿ ಯುವಕನಂತೆ ಇರುತ್ತದೆ: ಭೂಲೋಕದ ಪ್ರೀತಿಯಲ್ಲಿ ಮತ್ತು ಸುದೀರ್ಘ ಆಸೆಯಲ್ಲಿ (ಹೆಚ್ಚು ಕಾಲ ಬದುಕಬೇಕೆಂಬ ಆಸೆಯಲ್ಲಿ)".»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ವೃದ್ಧನ ದೇಹವು ವಯಸ್ಸಾಗಿ ದುರ್ಬಲಗೊಳ್ಳುತ್ತದೆ, ಆದರೆ ಅವನ ಹೃದಯವು ಎರಡು ವಿಷಯಗಳ ಪ್ರೀತಿಯಲ್ಲಿ ಯುವಕನಂತಿರುತ್ತದೆ: ಮೊದಲನೆಯದು: ಸಂಪತ್ತು ಶೇಖರಿಸುವ ಮೂಲಕ ಭೂಲೋಕವನ್ನು ಪ್ರೀತಿಸುವುದು. ಎರಡನೆಯದು: ದೀರ್ಘ ಜೀವನ, ಆಯಸ್ಸು, ಬದುಕು ಮತ್ತು ಆಸೆಗಳು.

Source
رواه البخاري
Download image

Saved at original quality