ಅಕೀದಾ
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 55 languages
«ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ಅಲ್ಲಾಹು ಸ್ವರ್ಗವಾಸಿಗಳೊಡನೆ ಕೇಳುವನು: "ಓ ಸ್ವರ್ಗವಾಸಿಗಳೇ!" ಅವರು ಉತ್ತರಿಸುವರು: "ನಾವು ನಿನಗೆ ಓಗೊಡುತ್ತಿದ್ದೇವೆ ಮತ್ತು ನಿನ್ನ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ." ಅವನು ಕೇಳುವನು: "ನಿಮಗೆ ತೃಪ್ತಿಯಾಗಿದೆಯೇ?" ಅವರು ಉತ್ತರಿಸುವರು: "ನಮಗೆ ತೃಪ್ತಿಯಾಗದಿರಲು ಹೇಗೆ ಸಾಧ್ಯ? ನೀನಂತೂ ನಿನ್ನ ಸೃಷ್ಟಿಗಳಲ್ಲಿ ಯಾರಿಗೂ ನೀಡದೇ ಇರುವುದನ್ನು ನಮಗೆ ನೀಡಿರುವೆ." ಅವನು ಹೇಳುವನು: "ನಾನು ಅದಕ್ಕಿಂತಲೂ ಶ್ರೇಷ್ಠವಾದುದನ್ನು ನಿಮಗೆ ನೀಡುವೆನು." ಅವರು ಕೇಳುವರು: "ಓ ನಮ್ಮ ಪರಿಪಾಲಕನೇ! ಇದಕ್ಕಿಂತಲೂ ಶ್ರೇಷ್ಠವಾದುದು ಇನ್ನೇನಿದೆ?" ಅವನು ಉತ್ತರಿಸುವನು: "ನಾನು ನನ್ನ ಸಂತೃಪ್ತಿಯನ್ನು ನಿಮ್ಮ ಮೇಲೆ ಸುರಿಸುವೆನು. ಇನ್ನು ನಾನು ನಿಮ್ಮೊಂದಿಗೆ ಎಂದಿಗೂ ಕೋಪಿಸಿಕೊಳ್ಳಲಾರೆನು."»Meaning translation ·
Saved at original quality








