Hadith for the World
ಪವಿತ್ರ ಕುರ್ ಆನ್ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Qur'anic Exegesis

2 hadiths

2 hadiths

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಪಶ್ಚಿಮದಿಂದ ಉದಯವಾಗುವ ತನಕ ಪ್ರಳಯ ಸಂಭವಿಸುವುದಿಲ್ಲ. ಅದು ಉದಯವಾದಾಗ ಜನರೆಲ್ಲರೂ ಅದನ್ನು ನೋಡಿ ವಿಶ್ವಾಸವಿಡುತ್ತಾರೆ. ಅದು ಯಾವಾಗ ಎಂದರೆ: "ಮೊದಲೇ ವಿಶ್ವಾಸವಿಟ್ಟವರ ಅಥವಾ ತಮ್ಮ ವಿಶ್ವಾಸದ ಮೂಲಕ ಏನಾದರೂ ಒಳಿತನ್ನು ಮಾಡಿದವರ ಹೊರತು ಯಾವುದೇ ವ್ಯಕ್ತಿಗೂ ಅವನ ವಿಶ್ವಾಸವು ಪ್ರಯೋಜನ ನೀಡುವುದಿಲ್ಲ." [ಅನ್‌ಆಮ್ 158] (ಎಂದು ಅಲ್ಲಾಹು ಹೇಳಿದ ಸಮಯದಲ್ಲಾಗಿದೆ). ನಿಶ್ಚಯವಾಗಿಯೂ ಇಬ್ಬರು ವ್ಯಕ್ತಿಗಳು ಬಟ್ಟೆಯನ್ನು ಹರಡಿ ಅದನ್ನು ಖರೀದಿಸುವುದಕ್ಕೆ ಅಥವಾ ಅದನ್ನು ಮಡಚಿಡುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಸರಿಪಡಿಸಿ (ಜಾನುವಾರುಗಳಿಗೆ) ನೀರುಣಿಸುವ ಮೊದಲೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಆಹಾರದ ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಪ್ರಳಯವು ಸಂಭವಿಸುತ್ತದೆ."متفق عليه
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಹುದೈಬಿಯ್ಯಾದಿಂದ ಹಿಂತಿರುಗುವಾಗ, “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ, ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಲು..” ಎಂಬಲ್ಲಿಂದ “...ಮಹಾನ್ ವಿಜಯವಾಗಿದೆ.” [ಸೂರಃ ಅಲ್-ಫತ್ಹ್: 1-5] ಎಂಬ ವಚನಗಳು ಅವತೀರ್ಣವಾದವು. ಆಗ ಅವರ (ಸಹಾಬಿಗಳ) ಮನಸ್ಸಿನಲ್ಲಿ ದುಃಖ ಮತ್ತು ಖಿನ್ನತೆ ತುಂಬಿಕೊಂಡಿತ್ತು. ಅವರು ಹುದೈಬಿಯ್ಯಾದಲ್ಲಿಯೇ ಬಲಿ ಪ್ರಾಣಿಗಳನ್ನು ವಧೆ ಮಾಡಿದ್ದರು. ಆಗ ಅವರು (ಪ್ರವಾದಿ) ಹೇಳಿದರು: "ಖಂಡಿತವಾಗಿಯೂ ನನಗೆ ಒಂದು ಆಯತ್ (ವಚನ) ಅವತೀರ್ಣವಾಗಿದೆ, ಅದು ನನಗೆ ಇಡೀ ಪ್ರಪಂಚಕ್ಕಿಂತ ಹೆಚ್ಚು ಪ್ರಿಯವಾಗಿದೆ".رواه مسلم