Hadith for the World
ಅಕೀದಾ

Names and Rulings

22 hadiths

22 hadiths

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ. ಆಗ ಬೆಳಗ್ಗೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಸಂಜೆಯಾದಾಗ ಸತ್ಯನಿಷೇಧಿಯಾಗುವನು ಅಥವಾ ಸಂಜೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಬೆಳಗಾದಾಗ ಸತ್ಯನಿಷೇಧಿಯಾಗುವನು. ಭೌತಿಕ ಲಾಭಕ್ಕಾಗಿ ಅವನು ತನ್ನ ಧರ್ಮವನ್ನು ಮಾರಾಟ ಮಾಡುವನು."رواه مسلم
عن أبي هريرة رضي الله عنه مرفوعاً: «الإيمانُ بِضْعٌ وَسَبْعُونَ أو بِضْعٌ وسِتُّونَ شُعْبَةً: فَأَفْضَلُهَا قَوْلُ: لا إله إلا الله، وَأَدْنَاهَا إِمَاطَةُ الأَذَى عَنِ الطَّرِيقِ، وَالحَيَاءُ شُعْبَةٌ مِنَ الإِيمَانِ».متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ. ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಅಲ್ಲಾಹು ಶಪಿಸಿದ್ದಾನೆ."رواه أحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ (ಪ್ರತಿಫಲವನ್ನು) ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಅಂಬೆಗಾಲಿಟ್ಟುಕೊಂಡಾದರೂ ಬರುತ್ತಿದ್ದರು. ಜನರಿಗೆ ನಮಾಝ್ ನಿರ್ವಹಿಸಲು ಆಜ್ಞಾಪಿಸಿ, ನಂತರ ಒಬ್ಬರನ್ನು ಅವರಿಗೆ ಇಮಾಂ ಆಗಿ ನೇಮಿಸಿ, ನಂತರ ಸೌದೆಗಳ ಕಟ್ಟುಗಳೊಂದಿಗೆ ಕೆಲವು ಜನರನ್ನು ಕರೆದುಕೊಂಡು ಹೋಗಿ, ನಮಾಝ್‌ಗೆ ಬರದವರ ಮನೆಗಳನ್ನು ಸುಟ್ಟುಬಿಡಲು ನಾನು ಯೋಚಿಸಿದ್ದೆ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ. ದುರ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪಾಪಕ್ಕೆ ಸಮಾನವಾದ ಪಾಪವನ್ನು ಪಡೆಯುತ್ತಾನೆ. ಅದು ಅವರ ಪಾಪಗಳಲ್ಲಿ ಏನನ್ನೂ ಕಡಿಮೆ ಮಾಡುವುದಿಲ್ಲ."رواه مسلم
ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು. ಪುನರುತ್ಥಾನ ದಿನದಂದು ಜನರಿಗೆ ಅವರ ಕರ್ಮಗಳ ಪ್ರತಿಫಲವನ್ನು ನೀಡುವಾಗ ತೋರಿಕೆಗಾಗಿ ಕೆಲಸ ಮಾಡಿದವರೊಡನೆ ಅಲ್ಲಾಹು ಹೇಳುವನು: 'ನೀವು ಇಹಲೋಕದಲ್ಲಿ ಯಾರಿಗೆ ತೋರಿಸಲು ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ಅವರಿಂದ ಏನಾದರೂ ಪ್ರತಿಫಲ ಸಿಗಬಹುದೇ ಎಂದು ನೋಡಿ."رواه أحمد
عن عبد الله بن عمرو بن العاص - رضي الله عنه- مرفوعاً: "مَن ردته الطِّيَرَة عن حاجته فقد أشرك، قالوا: فما كفارة ذلك؟ قال: أن تقول: اللهم لا خير إلا خيرك، ولا طَيْرَ إِلَّا طَيْرُكَ ولا إله غيرك".رواه أحمد
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗವು ನೋವಿನಿಂದ ಬಳಲುವಾಗ, ದೇಹದ ಉಳಿದೆಲ್ಲಾ ಭಾಗಗಳು ನಿದ್ರಾಹೀನತೆ ಮತ್ತು ಜ್ವರದ ಮೂಲಕ ಅದಕ್ಕೆ ಸ್ಪಂದಿಸುತ್ತವೆ."متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ ಸೇರಿದವರಲ್ಲ."متفق عليه
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಪತ್ನಿಯರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ. ಸಂಕೋಚವು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ."متفق عليه
ಬುರೈದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಮಾನತ್ (ವಿಶ್ವಾಸ, ನಂಬಿಕೆ) ನ ಮೇಲೆ ಆಣೆ ಮಾಡುತ್ತಾರೋ ಅವರು ನಮ್ಮವರಲ್ಲ."رواه أبو داود وأحمد
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್."متفق عليه
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು."متفق عليه
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ."رواه مسلم
ಅಬೂ ಮಾಲಿಕ್ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ. ನಮಾಝ್ ಬೆಳಕಾಗಿದೆ, ದಾನವು ಪುರಾವೆಯಾಗಿದೆ, ತಾಳ್ಮೆಯು ಪ್ರಕಾಶವಾಗಿದೆ, ಮತ್ತು ಕುರ್‌ಆನ್ ನಿನ್ನ ಪರವಾಗಿ ಅಥವಾ ನಿನಗೆ ವಿರುದ್ಧವಾಗಿರುವ ಪುರಾವೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬೆಳಗಾಗುತ್ತಲೇ ತನ್ನ ಆತ್ಮವನ್ನು ಮಾರಾಟ ಮಾಡುತ್ತಾನೆ. ನಂತರ ಅವನು ಅದನ್ನು ಸ್ವತಂತ್ರಗೊಳಿಸುತ್ತಾನೆ ಅಥವಾ ನಾಶಗೊಳಿಸುತ್ತಾನೆ."رواه مسلم
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಇಬ್ನ್ ಜುದ್‌ಆನ್ ಕುಟುಂಬ ಸಂಬಂಧಗಳನ್ನು ಜೋಡಿಸುತ್ತಿದ್ದರು ಮತ್ತು ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಅವರಿಗೆ ಅದು ಉಪಕರಿಸುತ್ತದೆಯೇ?" ಅವರು ಹೇಳಿದರು: “ಇಲ್ಲ, ಅವರಿಗೆ ಅದು ಉಪಕರಿಸುವುದಿಲ್ಲ. ಏಕೆಂದರೆ ಅವರು ಒಂದು ದಿನವೂ, 'ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು' ಎಂದು ಹೇಳಿಲ್ಲ."رواه مسلم
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಒಬ್ಬ ವ್ಯಕ್ತಿ ಮತ್ತು ಶಿರ್ಕ್ (ದೇವಸಹಭಾಗಿತ್ವ) ಹಾಗೂ ಕುಫ್ರ್ (ಸತ್ಯನಿಷೇಧ) ನ ನಡುವಿನ ಅಂತರವು ನಮಾಝನ್ನು ತೊರೆಯುವುದಾಗಿದೆ."رواه مسلم
عَنْ أَنَسِ بْنِ مَالِكٍ رَضِيَ اللَّهُ عَنْهُ، عَنِ النَّبِيِّ صَلَّى اللهُ عَلَيْهِ وَسَلَّمَ قَالَ: "ثَلاَثٌ مَنْ كُنَّ فِيهِ وَجَدَ حَلاَوَةَ الإِيمَانِ: أَنْ يَكُونَ اللَّهُ وَرَسُولُهُ أَحَبَّ إِلَيْهِ مِمَّا سِوَاهُمَا، وَأَنْ يُحِبَّ المَرْءَ لاَ يُحِبُّهُ إِلَّا لِلَّهِ، وَأَنْ يَكْرَهَ أَنْ يَعُودَ فِي الكُفْرِ كَمَا يَكْرَهُ أَنْ يُقْذَفَ فِي النَّارِ".متفق عليه
ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ಪರಿಪಾಲಕನಾಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್‌ರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ ಸಂತೃಪ್ತಿಯಿರುವವರು ಸತ್ಯವಿಶ್ವಾಸದ ಮಾಧುರ್ಯವನ್ನು ಸವಿಯುವರು."رواه مسلم
عن جابر بن عبد الله قال: كان رسول الله صلى الله عليه وسلم إذا خطب احمرَّتْ عيناه، وعلا صوته، واشتد غضبه، حتى كأنه مُنذِرُ جيشٍ يقول: صبَّحكم ومسَّاكم، ويقول: «بُعثتُ أنا والساعةُ كهاتين»، ويقرن بين إصبعيه السبابة، والوسطى، ويقول: «أما بعد، فإن خير الحديث كتاب الله، وخير الهدى هدى محمد، وشر الأمور محدثاتها، وكل بدعة ضلالة» ثم يقول: «أنا أولى بكل مؤمن من نفسه، من ترك مالًا فلأهله، ومن ترك دينًا أو ضَياعًا فإليَّ وعليَّ».رواه مسلم