Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 47 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ರಮದಾನ್ ತಿಂಗಳು ಬಂದರೆ ಮೂರು ವಿಷಯಗಳು ಸಂಭವಿಸುತ್ತವೆ: ಮೊದಲನೆಯದು: ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ. ಅವುಗಳಲ್ಲಿ ಯಾವುದೇ ಬಾಗಿಲು ಮುಚ್ಚಿರುವುದಿಲ್ಲ. ಎರಡನೆಯದು: ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಅವುಗಳಲ್ಲಿ ಯಾವುದೇ ಬಾಗಿಲು ತೆರೆದಿರುವುದಿಲ್ಲ. ಮೂರನೆಯದು: ಶೈತಾನರನ್ನು ಮತ್ತು ಬಂಡುಕೋರ ಜಿನ್ನ್‌ಗಳನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ. ಆದ್ದರಿಂದ ಅವರು ರಮದಾನ್ ಅಲ್ಲದ ಇತರ ತಿಂಗಳುಗಳಲ್ಲಿ ಮಾಡುತ್ತಿದ್ದಂತಹ ಕೆಡುಕನ್ನು ಈ ತಿಂಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಇವೆಲ್ಲವೂ ಈ ತಿಂಗಳ ಮಹತ್ವವನ್ನು ಹೆಚ್ಚಿಸುವುದಕ್ಕಾಗಿದೆ. ಹಾಗೆಯೇ ಪ್ರಾರ್ಥನೆ, ದಾನ, ಧಿಕ್ರ್ (ಅಲ್ಲಾಹುವಿನ ಸ್ಮರಣೆ), ಕುರ್‌ಆನ್ ಪಠಣ ಮತ್ತು ಇತರ ಸತ್ಕರ್ಮಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸಲು ಹಾಗೂ ಪಾಪಗಳು ಮತ್ತು ದುಷ್ಕೃತ್ಯಗಳಿಂದ ದೂರವಿರಲು ಪ್ರೋತ್ಸಾಹವಾಗಿದೆ.

Source
متفق عليه
Download image

Saved at original quality