Hadith for the World
Topic

ಫಿಕ್ಹ್ ಮತ್ತು ಉಸುಲ್-ಎ-ಫಿಖ್

288 hadiths

288 hadiths

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಯೊಂದಿಗೆ—ಇಬ್ನ್ ಅಬ್ಬಾಸ್ ಆಕೆಯ ಹೆಸರು ಹೇಳಿದ್ದರು ಆದರೆ ನಾನು ಅದನ್ನು ಮರೆತುಬಿಟ್ಟೆ— ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಮ್ಮೊಂದಿಗೆ ಹಜ್ಜ್ ನಿರ್ವಹಿಸದಂತೆ ನಿನ್ನನ್ನು ತಡೆದದ್ದೇನು?" ಅವಳು ಉತ್ತರಿಸಿದಳು: "ನಮ್ಮಲ್ಲಿರುವುದು ಎರಡು ಒಂಟೆಗಳು ಮಾತ್ರ. ಒಂದು ಒಂಟೆಯ ಮೇಲೆ ಅವಳ ಮಗನ ತಂದೆ ಮತ್ತು ಅವಳ ಮಗ ಹಜ್ಜ್ ನಿರ್ವಹಿಸಲು ಹೋದರು ಮತ್ತು ಇನ್ನೊಂದು ಒಂಟೆಯನ್ನು ಅವರು ನೀರು ಸಾಗಿಸಲು ನಮ್ಮಲ್ಲಿ ಬಿಟ್ಟರು." ಅವರು (ಪ್ರವಾದಿ) ಹೇಳಿದರು: "ರಮದಾನ್ ತಿಂಗಳು ಬಂದರೆ ಉಮ್ರ ನಿರ್ವಹಿಸು. ಏಕೆಂದರೆ, ಅದರಲ್ಲಿ ನಿರ್ವಹಿಸುವ ಉಮ್ರ ಹಜ್ಜ್‌ಗೆ ಸಮಾನವಾಗಿದೆ."متفق عليه
عن فَضَالَةُ بنُ عُبَيْدٍ وسلمان الفارسي وعقبة بن عامر الجهني رضي الله عنهم مرفوعاً: «كُلُّ مَيِّتٍ يُخْتَمُ على عَمَلِهِ إلا الُمرَابِطَ في سبيل الله، فإنه يَنْمِي لَهُ عَمَلَهُ يوم القيامة، ويُؤَمَّنُ فتنة القبر».رواه أبو داود والترمذي وأحمد من حديث فضالة -رضي الله عنه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು ಉತ್ತರಿಸಿದರು: "ಬೇಡ, ಬದಲಿಗೆ ಅತಿಶ್ರೇಷ್ಠ ಜಿಹಾದ್ ಎಂದರೆ ಹಜ್ಜ್ ಮಬ್ರೂರ್ (ಸ್ವೀಕೃತ ಹಜ್ಜ್) ಆಗಿದೆ."رواه البخاري
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'."متفق عليه
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿನ ಒಂದು ಯುದ್ಧದಲ್ಲಿ ಒಬ್ಬ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು.متفق عليه
عن عبد الله بن أبي أوفى رضي الله عنه أَنَّ رسول الله صلى الله عليه وسلم فِي بَعْض أَيَّامه التي لَقِي فيها العدو انتظر، حتى إذا مَالَتِ الشمس قام فِيهم، فقال: «أَيُّها الناس، لا تَتَمَنَّوْا لِقَاء الْعَدُوِّ، وَاسْأَلوا الله الْعافية فَإِذا لَقِيتموهم فَاصْبِرُوا، وَاعلموا أَنَّ الْجَنَّة تحت ظِلال السُّيوف ثُمَّ قَال النَّبِي صلى الله عليه وسلم: اللهمَّ مُنزِلَ الْكتاب، وَمُجْرِيَ السَّحاب، وَهازم الأَحْزاب: اهْزِمهم، وَانصُرنا علَيهم».متفق عليه
عن عَائِشَةُ رضي الله عنها «أَنَّ قُرَيْشا أَهَمَّهُم شَأن المَخْزُومِيَّة التي سَرَقَتْ، فَقَالُوا: مَنْ يُكَلِّمُ فيها رسول الله صلى الله عليه وسلم ؟، فقالوا: وَمَنْ يَجْتَرِئُ عليه إلا أسامة بن زيد حِبُّ رسول الله صلى الله عليه وسلم فَكَلَّمَهُ أسامة، فَقَالَ: أَتَشْفَعُ فِي حَدٍّ مِنْ حُدُودِ الله؟ ثُمَّ قَامَ فَاخْتَطَبَ، فقال: إنَّمَا أَهْلَكَ الذين مِنْ قَبْلِكُمْ أنهم كانوا إذا سرق فيهم الشريف تركوه، وإذا سرق فيهم الضعيف أَقَامُوا عليه الحد، وَأَيْمُ الله: لَوْ أَنَّ فاطمة بنت محمد سَرَقَتْ لَقَطَعْتُ يَدَهَا». وَفِي لَفْظٍ «كانت امرأة تَسْتَعِيرُ المَتَاعَ وَتَجْحَدُهُ، فَأَمَرَ النبي صلى الله عليه وسلم بِقَطْعِ يَدِهَا».متفق عليه
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು ತರುವುದಿಲ್ಲ. ಅದರಿಂದ ಜಿಪುಣನಲ್ಲಿರುವ (ಹಣವನ್ನು) ಮಾತ್ರ ಹೊರತೆಗೆಯಲಾಗುತ್ತದೆ."متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ."متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಾಲು ದೀನಾರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಕದ್ದರೆ ಕೈಯನ್ನು ಕತ್ತರಿಸಲಾಗುವುದು."متفق عليه
ಸಹ್ಲ್ ಬಿನ್ ಸಅದ್ ಸಾಇದೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಒಂದು ದಿನ 'ರಿಬಾತ್' ಮಾಡುವುದು (ಗಡಿಯಲ್ಲಿ ಕಾವಲು ಕಾಯುವುದು) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನಿಗೆ ದೊರೆಯುವ ಚಾಟಿಯಷ್ಟು (ಅಥವಾ ಚಾಟಿ ಇಡುವಷ್ಟು) ಸ್ಥಳವು ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ದಾಸನು ಮಾಡುವ ಒಂದು ಸಂಜೆಯ ನಡೆಯುವಿಕೆ (ರೌಹ) ಅಥವಾ ಒಂದು ಮುಂಜಾನೆಯ ನಡೆಯುವಿಕೆ (ಗದ್ವಾ) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ".متفق عليه
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌರ್ಯಕ್ಕಾಗಿ ಹೋರಾಡುವ, ಕೋಮುವಾದಕ್ಕಾಗಿ ಹೋರಾಡುವ, ಮತ್ತು ತೋರಿಕೆಗಾಗಿ ಹೋರಾಡುವ ವ್ಯಕ್ತಿಯ ಬಗ್ಗೆ—ಇವರಲ್ಲಿ ಅಲ್ಲಾಹನ ಮಾರ್ಗದಲ್ಲಿರುವವರು ಯಾರು? ಎಂದು ಕೇಳಲಾಯಿತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು."متفق عليه
عن أبي هريرة رضي الله عنه قَالَ: قَالَ رَسُولُ اللَّهِ صلى الله عليه وسلم : «ما من مَكْلُومٍ يُكْلَمُ في سبيل الله، إلا جاء يومَ القيامة، وكَلْمُهُ يَدْمَى: اللَّونُ لَوْنُ الدَّمِ، والرِّيحُ رِيحُ المِسْكِ».متفق عليه
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬೇಟೆಯಾಡುವ ಅಥವಾ ಜಾನುವಾರುಗಳನ್ನು ಕಾಯುವ ನಾಯಿಯನ್ನು ಹೊರತುಪಡಿಸಿ, ಬೇರೆ ಯಾವುದೇ ನಾಯಿಯನ್ನು ಯಾರಾದರೂ ಸಾಕುವುದಾದರೆ, ಅವನ ಪುಣ್ಯದಿಂದ ಪ್ರತಿದಿನ ಎರಡು ಕೀರಾತ್‌ಗಳಷ್ಟು ಕಡಿಮೆಯಾಗುತ್ತದೆ." ಸಾಲಿಂ ಹೇಳಿದರು: ಅಬು ಹುರೈರ "ಅಥವಾ ಕೃಷಿ ಭೂಮಿಯನ್ನು ಕಾಯುವ ನಾಯಿ" ಎಂದು ಕೂಡ ಹೇಳುತ್ತಿದ್ದರು. ಅವರು ಕೃಷಿ ಭೂಮಿಯನ್ನು ಹೊಂದಿದ್ದರು.متفق عليه
عن ثابِت بْن الضَّحَاكِ رضي الله عنه أنه بايع رسول الله صلى الله عليه وسلم تحت الشجرة، وأن رسول الله صلى الله عليه وسلم قال: «من حلف على يمين بملة غير الإسلام، كاذبا مُتَعَمِّدًا فهو كما قال، ومن قتل نفسه بشيء عُذِّبَ به يوم القيامة، وليس على رجل نَذْرٌ فيما لا يملك» وَفِي رِوَايَة: «ولَعْنُ المؤمنِ كَقَتْلِهِ». وفي رواية: «من ادَّعَى دَعْوَى كَاذِبَةً لِيَتَكَثَّرَ بها لم يَزِدْهُ اللهُ -عزَّ وجل- إلا قِلَّةً».متفق عليه
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ."متفق عليه
عن عَبْد اللهِ بن أبي أوفى رضي الله عنهما قال: «غَزَوْنَا مَعَ رَسُولِ الله صلى الله عليه وسلم سَبْعَ غَزَوَاتٍ، نَأْكُلُ الْجَرَادَ».متفق عليه
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ."متفق عليه
ಮುಗೀರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಆಗ ನಾನು ಅವರ ಪಾದರಕ್ಷೆಗಳನ್ನು ಕಳಚಲು ಮುಂದಾದೆ. ಆಗ ಅವರು ಹೇಳಿದರು: "ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ." ನಂತರ ಅವರು ಅವುಗಳ ಮೇಲೆ ಸವರಿದರು.متفق عليه
عن عبد الله بن عمر رضي الله عنهما «أنَّ رسُول الله -صلَّى الله عليه وسلَّم- دَخَل مكَّة مِن كَدَاٍء، مِن الثَنِيَّة العُليَا التِّي بالبَطحَاءِ، وخرج من الثَنِيَّة السُفلَى».متفق عليه
ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹಜರುಲ್-ಅಸ್ವದ್ (ಕಪ್ಪು ಕಲ್ಲು) ಬಳಿಗೆ ಬಂದು ಅದನ್ನು ಚುಂಬಿಸಿದರು. ನಂತರ ಹೇಳಿದರು: "ಖಂಡಿತವಾಗಿಯೂ ನೀನು ಕಲ್ಲು ಎಂದು ನನಗೆ ತಿಳಿದಿದೆ. ನೀನು ತೊಂದರೆ ಕೊಡುವುದಿಲ್ಲ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿನ್ನನ್ನು ಚುಂಬಿಸುವುದನ್ನು ನಾನು ನೋಡದಿರುತ್ತಿದ್ದರೆ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ."متفق عليه
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ."متفق عليه
ಅಬೂ ಸಈದ್ ಖುದ್ರಿ (ರ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ಅದರಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿ, ನೀವು ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತಾನೆ. ಆದ್ದರಿಂದ ನೀವು ಇಹಲೋಕವನ್ನು ಭಯಪಡಿರಿ ಮತ್ತು ಸ್ತ್ರೀಯರನ್ನು ಭಯಪಡಿರಿ. ಏಕೆಂದರೆ, ಬನೂ ಇಸ್ರಾಈಲರ ಮೊತ್ತಮೊದಲ ಪರೀಕ್ಷೆಯು ಸ್ತ್ರೀಯರ ಮೂಲಕವಾಗಿತ್ತು."رواه مسلم