ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
Available in 60 languages
«ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಯೊಂದಿಗೆ—ಇಬ್ನ್ ಅಬ್ಬಾಸ್ ಆಕೆಯ ಹೆಸರು ಹೇಳಿದ್ದರು ಆದರೆ ನಾನು ಅದನ್ನು ಮರೆತುಬಿಟ್ಟೆ— ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಮ್ಮೊಂದಿಗೆ ಹಜ್ಜ್ ನಿರ್ವಹಿಸದಂತೆ ನಿನ್ನನ್ನು ತಡೆದದ್ದೇನು?" ಅವಳು ಉತ್ತರಿಸಿದಳು: "ನಮ್ಮಲ್ಲಿರುವುದು ಎರಡು ಒಂಟೆಗಳು ಮಾತ್ರ. ಒಂದು ಒಂಟೆಯ ಮೇಲೆ ಅವಳ ಮಗನ ತಂದೆ ಮತ್ತು ಅವಳ ಮಗ ಹಜ್ಜ್ ನಿರ್ವಹಿಸಲು ಹೋದರು ಮತ್ತು ಇನ್ನೊಂದು ಒಂಟೆಯನ್ನು ಅವರು ನೀರು ಸಾಗಿಸಲು ನಮ್ಮಲ್ಲಿ ಬಿಟ್ಟರು." ಅವರು (ಪ್ರವಾದಿ) ಹೇಳಿದರು: "ರಮದಾನ್ ತಿಂಗಳು ಬಂದರೆ ಉಮ್ರ ನಿರ್ವಹಿಸು. ಏಕೆಂದರೆ, ಅದರಲ್ಲಿ ನಿರ್ವಹಿಸುವ ಉಮ್ರ ಹಜ್ಜ್‌ಗೆ ಸಮಾನವಾಗಿದೆ."»Meaning translation ·
Saved at original quality







