ಸದ್ಗುಣಗಳು ಮತ್ತು ನಡವಳಿಕೆಗಳು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 48 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: 'ನಾನು ನನ್ನ ಸಜ್ಜನ ದಾಸರಿಗಾಗಿ (ಸ್ವರ್ಗದಲ್ಲಿ) ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ಸುಖಸಾಧನಗಳನ್ನು) ಯಾವ ಕಣ್ಣೂ ಕಂಡಿಲ್ಲ, ಯಾವ ಕಿವಿಯೂ ಕೇಳಿಲ್ಲ, ಮತ್ತು ಯಾವ ಮಾನವನ ಹೃದಯಕ್ಕೂ ಅದರ ಕಲ್ಪನೆ ಬಂದಿಲ್ಲ' ". ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನೀವು ಇಚ್ಛಿಸುವುದಾದರೆ ಪಠಿಸಿರಿ: "ಯಾವುದೇ ಆತ್ಮಕ್ಕೂ ತಿಳಿದಿಲ್ಲ, ಕಣ್ಣುಗಳಿಗೆ ತಂಪು ನೀಡುವಂತಹ ಏನೆಲ್ಲಾ ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂದು." [ಸೂರ ಸಜ್ದಾ: 32:17].»Meaning translation ·
Saved at original quality








