ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಸೌಬಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
Available in 65 languages
«ಸೌಬಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುತ್ತಿದ್ದರು. ನಂತರ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” (ವರದಿಗಾರರಲ್ಲಿ ಒಬ್ಬರಾದ) ವಲೀದ್ ಹೇಳುತ್ತಾರೆ: ನಾನು ಔಝಾಈರೊಡನೆ ಕೇಳಿದೆ: "ನಾನು ಕ್ಷಮೆಯಾಚನೆ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅಸ್ತಗ್ಫಿರುಲ್ಲಾಹ್, ಅಸ್ತಗ್ಫಿರುಲ್ಲಾಹ್ ಎಂದು ಹೇಳುವುದು."»Meaning translation ·
Saved at original quality








