ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
Available in 37 languages
«ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲಿದ್ದಾಗ ಅವರಲ್ಲಿ ಕೇಳಿದನು: "ರಾತ್ರಿ ನಮಾಝ್‌ನ ಬಗ್ಗೆ ನೀವೇನು ಹೇಳುತ್ತೀರಿ?". ಅವರು (ಪ್ರವಾದಿ) ಹೇಳಿದರು: "(ಅದು) ಎರಡೆರಡು ರಕಅತ್‌ಗಳು. ಬೆಳಗಾಗುವುದೆಂದು (ಫಜ್ರ್ ನಮಾಝಿನ ಸಮಯವಾಗುವುದೆಂದು) ಭಯವಾದರೆ, ಒಂದು ರಕಅತ್ ನಿರ್ವಹಿಸಬೇಕು. ಅದು ಅದಕ್ಕೂ ಮುನ್ನ ನಿರ್ವಹಿಸಿದ ನಮಾಝ್ ಅನ್ನು 'ವಿತ್ರ್' (ಬೆಸ ಸಂಖ್ಯೆ) ಗೊಳಿಸುತ್ತದೆ". ಅವರು (ಇಬ್ನ್ ಉಮರ್) ಹೇಳುತ್ತಿದ್ದರು: "ನಿಮ್ಮ (ರಾತ್ರಿಯ) ನಮಾಝ್‌ನ ಕೊನೆಯದನ್ನು ವಿತ್ರ್ ಗೊಳಿಸಿರಿ". ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಆದೇಶಿಸಿದ್ದಾರೆ.»Meaning translation ·
Saved at original quality








