Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ:

Available in 61 languages
«ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: "ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಪಡೆದಿದ್ದೀರಿ. ಅವನು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ."»

Meaning translation ·

Explanation

The meaning in a few plain lines

ಮನೆಯೊಳಗೆ ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವ ಮೊದಲು ಅಲ್ಲಾಹನನ್ನು ಸ್ಮರಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದ್ದಾರೆ. ಅದೇಕೆಂದರೆ, ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ 'ಬಿಸ್ಮಿಲ್ಲಾ' ಎಂದು ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ: ಈ ಮನೆಯಲ್ಲಿ ನಿಮಗೆ ರಾತ್ರಿ ವಾಸ ಮಾಡುವ ಅಥವಾ ರಾತ್ರಿ ಭೋಜನ ಮಾಡುವ ಭಾಗ್ಯವಿಲ್ಲ. ಏಕೆಂದರೆ, ಈ ಮನೆಯ ಯಜಮಾನನು ಅಲ್ಲಾಹನ ಸ್ಮರಣೆಯ ಮೂಲಕ ಇದನ್ನು ನಿಮ್ಮಿಂದ ಭದ್ರಪಡಿಸಿದ್ದಾನೆ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಥವಾ ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ: ನೀವು ಈ ಮನೆಯಲ್ಲಿ ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ.

Source
رواه مسلم
Download image

Saved at original quality