Hadith for the World
Jurisprudence of Supplications and Remembrance of Allah

Benefits of Remembering Allah

8 hadiths

8 hadiths

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: "ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಪಡೆದಿದ್ದೀರಿ. ಅವನು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅವನು ನನ್ನನ್ನು ನೆನಪಿಸಿಕೊಂಡಾಗ ನಾನು ಅವನೊಂದಿಗೆ ಇರುತ್ತೇನೆ. ಅವನು ನನ್ನನ್ನು ಮನಸ್ಸಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನನ್ನು ಒಂದು ಗುಂಪಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಅದಕ್ಕಿಂತಲೂ ಉತ್ತಮವಾದ ಗುಂಪಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನ ಕಡೆಗೆ ಒಂದು ಗೇಣಿನ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾಗುತ್ತೇನೆ. ಮತ್ತು ಅವನು ನನ್ನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಬಾವು (ಎರಡು ಕೈಗಳನ್ನು ಅಗಲಿಸಿದಾಗ ಉಂಟಾಗುವ ಅಳತೆ) ಅಂತರದಷ್ಟು ಹತ್ತಿರವಾಗುತ್ತೇನೆ. ಅವನು ನನ್ನ ಬಳಿಗೆ ನಡೆದುಕೊಂಡು ಬಂದರೆ, ನಾನು ಅವನ ಬಳಿಗೆ ಓಡುತ್ತಾ ಬರುತ್ತೇನೆ."متفق عليه
ಸ'ಅದ್ ಇಬ್ನ್ ಅಬೀ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೆವು. ಆಗ ಅವರು ಹೇಳಿದರು: "ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?" ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: "ನಮ್ಮಲ್ಲೊಬ್ಬನು ಒಂದು ಸಾವಿರ ಪುಣ್ಯಗಳನ್ನು ಹೇಗೆ ಗಳಿಸಬಹುದು?" ಅವರು (ಪ್ರವಾದಿ) ಹೇಳಿದರು: "ಅವನು ನೂರು ಬಾರಿ ತಸ್ಬೀಹ್ (ಸುಬ್‌ಹಾನಲ್ಲಾಹ್) ಹೇಳುತ್ತಾನೆ. ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ, ಅಥವಾ ಅವನಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ".رواه مسلم
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ ಪರಿಪಾಲಕನನ್ನು ಸ್ಮರಿಸುವವನ ಮತ್ತು ತನ್ನ ಪರಿಪಾಲಕನನ್ನು ಸ್ಮರಿಸದವನ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ಅಲ್ಲಾಹನನ್ನು ಸ್ಮರಿಸಲ್ಪಡುವ ಮನೆಯ ಉದಾಹರಣೆ ಮತ್ತು ಅಲ್ಲಾಹನನ್ನು ಸ್ಮರಿಸಲ್ಪಡದ ಮನೆಯ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ."متفق عليه
ಕಅಬ್ ಬಿನ್ ಉಜ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು."رواه مسلم
عن زيد مولى رسول الله صلى الله عليه وسلم قال: قال رسول الله صلى الله عليه وسلم : «من قال: أَسْتَغْفِرُ الله الذي لا إله إلا هو الحَيَّ القيَّومَ وأتوب إليه، غُفرت ذنوبه، وإن كان قد فَرَّ من الزَّحْف».رواه أبو داود والترمذي
ಅಬೂ ಮಾಲಿಕ್ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ. ನಮಾಝ್ ಬೆಳಕಾಗಿದೆ, ದಾನವು ಪುರಾವೆಯಾಗಿದೆ, ತಾಳ್ಮೆಯು ಪ್ರಕಾಶವಾಗಿದೆ, ಮತ್ತು ಕುರ್‌ಆನ್ ನಿನ್ನ ಪರವಾಗಿ ಅಥವಾ ನಿನಗೆ ವಿರುದ್ಧವಾಗಿರುವ ಪುರಾವೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬೆಳಗಾಗುತ್ತಲೇ ತನ್ನ ಆತ್ಮವನ್ನು ಮಾರಾಟ ಮಾಡುತ್ತಾನೆ. ನಂತರ ಅವನು ಅದನ್ನು ಸ್ವತಂತ್ರಗೊಳಿಸುತ್ತಾನೆ ಅಥವಾ ನಾಶಗೊಳಿಸುತ್ತಾನೆ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು ನೀಡುತ್ತಾನೆ: ನ್ಯಾಯ ನೀತಿ ಪಾಲಿಸುವ ಆಡಳಿತಗಾರ, ಅಲ್ಲಾಹುವಿನ ಆರಾಧನೆಯಲ್ಲಿಯೇ ಬೆಳೆದು ದೊಡ್ಡವನಾದ ಯುವಕ, ಮಸೀದಿಗಳೊಂದಿಗೆ ಹೃದಯವು ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿ, ಅಲ್ಲಾಹುವಿಗಾಗಿ ಪರಸ್ಪರ ಪ್ರೀತಿಸಿದ ಇಬ್ಬರು ವ್ಯಕ್ತಿಗಳು - ಅವರು ಅವನಿಗಾಗಿಯೇ ಒಂದಾದರು ಮತ್ತು ಅವನಿಗಾಗಿಯೇ ಬೇರ್ಪಟ್ಟರು, ಸ್ಥಾನಮಾನ ಮತ್ತು ಸೌಂದರ್ಯವುಳ್ಳ ಮಹಿಳೆಯೊಬ್ಬಳು (ವ್ಯಭಿಚಾರಕ್ಕೆ) ಆಹ್ವಾನಿಸಿದಾಗ, 'ಖಂಡಿತವಾಗಿಯೂ ನಾನು ಅಲ್ಲಾಹುವನ್ನು ಭಯಪಡುತ್ತೇನೆ' ಎಂದು ಹೇಳಿದ ವ್ಯಕ್ತಿ. ದಾನವನ್ನು (ಸದಕಾ) ನೀಡಿದ ವ್ಯಕ್ತಿ - ಅವನು ಅದನ್ನು ಎಷ್ಟು ಗುಪ್ತವಾಗಿಟ್ಟನೆಂದರೆ ಅವನ ಬಲಗೈ ಖರ್ಚು (ದಾನ) ಮಾಡಿದ್ದು ಅವನ ಎಡಗೈಗೆ ತಿಳಿಯಲಿಲ್ಲ ಮತ್ತು ಏಕಾಂತದಲ್ಲಿ ಅಲ್ಲಾಹುವನ್ನು ಸ್ಮರಿಸಿ, ಕಣ್ಣುಗಳು ಕಣ್ಣೀರಿನಿಂದ ತುಂಬಿ ಹರಿದ ವ್ಯಕ್ತಿ."متفق عليه