Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಸ'ಅದ್ ಇಬ್ನ್ ಅಬೀ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:

Available in 39 languages
«ಸ'ಅದ್ ಇಬ್ನ್ ಅಬೀ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೆವು. ಆಗ ಅವರು ಹೇಳಿದರು: "ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?" ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: "ನಮ್ಮಲ್ಲೊಬ್ಬನು ಒಂದು ಸಾವಿರ ಪುಣ್ಯಗಳನ್ನು ಹೇಗೆ ಗಳಿಸಬಹುದು?" ಅವರು (ಪ್ರವಾದಿ) ಹೇಳಿದರು: "ಅವನು ನೂರು ಬಾರಿ ತಸ್ಬೀಹ್ (ಸುಬ್‌ಹಾನಲ್ಲಾಹ್) ಹೇಳುತ್ತಾನೆ. ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ, ಅಥವಾ ಅವನಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ".»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳೊಡನೆ ಕೇಳಿದರು: ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಪಡೆಯಲು ಸಾಧ್ಯವಿಲ್ಲವೇ?! ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: ಒಬ್ಬ ವ್ಯಕ್ತಿಯು ಒಂದು ದಿನದಲ್ಲಿ ಸುಲಭವಾಗಿ ಒಂದು ಸಾವಿರ ಪುಣ್ಯಗಳನ್ನು ಹೇಗೆ ಪಡೆಯಬಹುದು? ಅವರು (ಪ್ರವಾದಿ) ಹೇಳಿದರು: ಅವನು ನೂರು ಬಾರಿ "ಸುಬ್‌ಹಾನಲ್ಲಾಹ್" ಎಂದು ಹೇಳುತ್ತಾನೆ; ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ; ಏಕೆಂದರೆ ಒಂದು ಪುಣ್ಯಕ್ಕೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಅಥವಾ ಅವನ ಪಾಪಗಳಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ.

Source
رواه مسلم
Download image

Saved at original quality