ಸದ್ಗುಣಗಳು ಮತ್ತು ನಡವಳಿಕೆಗಳು
ವಹ್ಶೀ ಇಬ್ನ್ ಹರ್ಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
Available in 40 languages
«ವಹ್ಶೀ ಇಬ್ನ್ ಹರ್ಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು (ಸಹಾಬಿಗಳು) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಖಂಡಿತವಾಗಿಯೂ ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ". ಅವರು (ಪ್ರವಾದಿ) ಹೇಳಿದರು: "ಬಹುಶಃ ನೀವು ಬೇರೆ ಬೇರೆಯಾಗಿ ತಿನ್ನುತ್ತೀರಾ?". ಅವರು (ಸಹಾಬಿಗಳು) ಹೇಳಿದರು: "ಹೌದು". ಅವರು (ಪ್ರವಾದಿ) ಹೇಳಿದರು: "ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ, ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ. ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು".»Meaning translation ·
Saved at original quality








