Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ನವ್ವಾಸ್ ಬಿನ್ ಸಮ್‌ಆನ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

Available in 62 languages
«ನವ್ವಾಸ್ ಬಿನ್ ಸಮ್‌ಆನ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುಣ್ಯ ಮತ್ತು ಪಾಪದ ಬಗ್ಗೆ ಕೇಳಿದೆ. ಅವರು ಉತ್ತರಿಸಿದರು: "ಪುಣ್ಯವೆಂದರೆ ಅತ್ಯುತ್ತಮ ನಡವಳಿಕೆ. ಪಾಪವೆಂದರೆ ನಿನ್ನ ಎದೆಯಲ್ಲಿ ಕಸಿವಿಸಿ ಉಂಟು ಮಾಡುವ ಮತ್ತು ಜನರು ಅದನ್ನು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದ ವಿಷಯ."»

Meaning translation ·

Explanation

The meaning in a few plain lines

ಪುಣ್ಯ ಮತ್ತು ಪಾಪದ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: ಅವರು ಉತ್ತರಿಸಿದರು: ಪುಣ್ಯದ ಶ್ರೇಷ್ಠ ಲಕ್ಷಣಗಳು ಏನೆಂದರೆ, ಭಯಭಕ್ತಿಯ ಮೂಲಕ ಅಲ್ಲಾಹನೊಡನೆ ಉತ್ತಮ ನಡವಳಿಕೆಯನ್ನು ತೋರುವುದು, ನೋವನ್ನು ಸಹಿಸಿಕೊಳ್ಳುವ ಮೂಲಕ ಮನುಷ್ಯರೊಡನೆ ಉತ್ತಮ ನಡವಳಿಕೆ ತೋರುವುದು, ಕೋಪ ಕಡಿಮೆ ಮಾಡುವುದು, ಮುಖದಲ್ಲಿ ನಗು ಸೂಸುವುದು, ಮಧುರವಾಗಿ ಮಾತನಾಡುವುದು, ಸಂಬಂಧ ಬೆಸೆಯುವುದು, ವಿಧೇಯವಾಗಿ ನಡೆದುಕೊಳ್ಳುವುದು, ಅನುಕಂಪ ತೋರುವುದು, ಉತ್ತಮವಾಗಿ ವರ್ತಿಸುವುದು ಮತ್ತು ಸ್ನೇಹ ಮಾಡುವುದು. ಪಾಪವೆಂದರೆ, ಮನಸ್ಸಿನಲ್ಲಿ ಚಡಪಡಿಕೆ ಉಂಟುಮಾಡುವ ಗೊಂದಲಗಳು ಮತ್ತು ಎದೆಯು ಅದಕ್ಕೆ ತೆರೆದುಕೊಳ್ಳಲು ಹಿಂಜರಿಯುವಂತದ್ದು. ಅದರಿಂದಾಗಿ ಹೃದಯದಲ್ಲಿ ಸಂದೇಹ ಉಂಟಾಗುತ್ತದೆ ಮತ್ತು ಅದು ಪಾಪವಾಗಿರುವುದರಿಂದ ಭಯ ಮೂಡುತ್ತದೆ. ಅದು ನೀಚವಾಗಿರುವುದರಿಂದ ಅದನ್ನು ಶ್ರೇಷ್ಠ ಮತ್ತು ಮಾದರಿಯೋಗ್ಯ ಜನರಿಗೆ ತಿಳಿಯಲು ನೀವು ಬಯಸುವುದಿಲ್ಲ. ಏಕೆಂದರೆ ಮನಸ್ಸು ಸ್ವಾಭಾವಿಕವಾಗಿ ಒಳಿತನ್ನು ಮಾತ್ರ ಜನರು ನೋಡಬೇಕೆಂದು ಬಯಸುತ್ತದೆ. ಅದು ತನ್ನ ಕೆಲವು ಕೆಲಸಗಳನ್ನು ಇತರರು ತಿಳಿಯಬಾರದೆಂದು ಬಯಸುತ್ತಿದ್ದರೆ, ಆ ಕೆಲಸಗಳು ಪಾಪಗಳಾಗಿದ್ದು ಅವುಗಳಲ್ಲಿ ಯಾವುದೇ ಒಳಿತಿಲ್ಲ.

Source
رواه مسلم
Download image

Saved at original quality