Hadith for the World
Heart-Softeners and Sermons

Acts of Heart

14 hadiths

14 hadiths

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯದ ಬಗ್ಗೆ ವಿಚಾರಿಸುತ್ತಾ ಕೇಳಿದರು: "ಅಂತ್ಯಸಮಯ ಯಾವಾಗ?" ಅವರು ಕೇಳಿದರು: "ನೀನು ಅದಕ್ಕಾಗಿ ಏನನ್ನು ಸಿದ್ಧಪಡಿಸಿದ್ದೀಯಾ?" ಆ ವ್ಯಕ್ತಿ ಉತ್ತರಿಸಿದರು: "ಏನೂ ಇಲ್ಲ. ಆದರೆ ನಾನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುತ್ತೇನೆ." ಆಗ ಅವರು (ಪ್ರವಾದಿ) ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ." ಅನಸ್ ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ" ಎಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನ್ನು ಕೇಳಿ ನಮಗೆ ಎಷ್ಟು ಸಂತೋಷವಾಯಿತೆಂದರೆ, ಅಷ್ಟು ಸಂತೋಷ ನಮಗೆ ಇನ್ನಾವುದರಿಂದಲೂ ಉಂಟಾಗಿರಲಿಲ್ಲ." ಅನಸ್ ಹೇಳಿದರು: "ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅಬೂಬಕರ್‌ರನ್ನು ಮತ್ತು ಉಮರ್‌ರನ್ನು ಪ್ರೀತಿಸುತ್ತೇನೆ. ಅವರು ಮಾಡಿದಂತಹ ಕರ್ಮಗಳನ್ನು ನಾನು ಮಾಡಿರದಿದ್ದರೂ ಸಹ, ನನಗೆ ಅವರಲ್ಲಿರುವ ಪ್ರೀತಿಯಿಂದಾಗಿ ನಾನು ಅವರೊಂದಿಗೆ ಇರಲು ಬಯಸುತ್ತೇನೆ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡುತ್ತಾನೋ, ನಾನು ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ತೊರೆದು ಬಿಡುವೆನು”.رواه مسلم
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದುವುದಕ್ಕೆ ಮೂರು ದಿನಗಳ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು."رواه مسلم
ನವ್ವಾಸ್ ಬಿನ್ ಸಮ್‌ಆನ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುಣ್ಯ ಮತ್ತು ಪಾಪದ ಬಗ್ಗೆ ಕೇಳಿದೆ. ಅವರು ಉತ್ತರಿಸಿದರು: "ಪುಣ್ಯವೆಂದರೆ ಅತ್ಯುತ್ತಮ ನಡವಳಿಕೆ. ಪಾಪವೆಂದರೆ ನಿನ್ನ ಎದೆಯಲ್ಲಿ ಕಸಿವಿಸಿ ಉಂಟು ಮಾಡುವ ಮತ್ತು ಜನರು ಅದನ್ನು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದ ವಿಷಯ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ರೂಪಗಳನ್ನು ಅಥವಾ ನಿಮ್ಮ ಆಸ್ತಿಯನ್ನು ನೋಡುವುದಿಲ್ಲ. ಬದಲಿಗೆ, ಅವನು ನಿಮ್ಮ ಹೃದಯಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ."رواه مسلم
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕರ್ಮಗಳು ಉದ್ದೇಶದ (ನಿಯ್ಯತ್) ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬರಿಗೂ ಅವರ ಉದ್ದೇಶಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ. ಆದ್ದರಿಂದ ಯಾರ ಹಿಜ್ರ (ವಲಸೆ) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಾಗಿದೆಯೋ, ಅವನ ಹಿಜ್ರವನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆಂದೇ ಪರಿಗಣಿಸಲಾಗುವುದು. ಆದರೆ ಯಾರು ಐಹಿಕ ಲಾಭವನ್ನು ಪಡೆಯಲು ಅಥವಾ ಒಬ್ಬ ಮಹಿಳೆಯನ್ನು ವಿವಾಹವಾಗಲು ಹಿಜ್ರ ಮಾಡುತ್ತಾನೋ ಅವನ ಹಿಜ್ರವನ್ನು ಅದೇ ಉದ್ದೇಶಕ್ಕೆಂದು ಪರಿಗಣಿಸಲಾಗುವುದು." ಬುಖಾರಿಯ ವರದಿಯಲ್ಲಿ ಹೀಗಿದೆ: "ಕರ್ಮಗಳು ಉದ್ದೇಶಗಳ (ನಿಯ್ಯತ್‌ಗಳ) ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬರಿಗೂ ಅವರ ಉದ್ದೇಶಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ. ನಿನಗೆ ಪ್ರಯೋಜನಕಾರಿಯಾದ ವಿಷಯದಲ್ಲಿ ಉತ್ಸುಕನಾಗು, ಅಲ್ಲಾಹನಲ್ಲಿ ಸಹಾಯ ಬೇಡು ಮತ್ತು ಅಸಹಾಯಕನಾಗಬೇಡ. ನಿನಗೇನಾದರೂ ಸಂಭವಿಸಿದರೆ, "ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗಾಗುತ್ತಿತ್ತು" ಎಂದು ಹೇಳಬೇಡ. ಬದಲಿಗೆ, "ಇದು ಅಲ್ಲಾಹು ವಿಧಿಸಿದ್ದು; ಅವನು ಇಚ್ಛಿಸುವುದನ್ನು ಅವನು ಮಾಡುತ್ತಾನೆ" ಎಂದು ಹೇಳು. ಏಕೆಂದರೆ ‘ಒಂದು ವೇಳೆ' ಎಂಬ ಮಾತು ಶೈತಾನನು ಕಾರ್ಯೋನ್ಮುಖನಾಗಲು ಬಾಗಿಲು ತೆರೆದುಕೊಡುತ್ತದೆ."رواه مسلم
ಬನೂ ಮುಜಾಶಿಅ್ ಗೋತ್ರದ ಇಯಾದ್ ಇಬ್ನ್ ಹಿಮಾರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಮಧ್ಯೆ ಎದ್ದು ನಿಂತು ಪ್ರವಚನ ನೀಡಿದರು. ಅವರು ಹೇಳಿದರು: (ಮತ್ತು ಅವರು ಹದೀಸ್ ಅನ್ನು ಮುಂದುವರಿಸಿದರು, ಅದರಲ್ಲಿ ಇದೂ ಇತ್ತು): "ಖಂಡಿತವಾಗಿಯೂ ನೀವು ಪರಸ್ಪರ ವಿನಯ ತೋರುವುದು ಕಡ್ಡಾಯವೆಂದು ಅಲ್ಲಾಹು ನನಗೆ 'ವಹೀ' (ದೈವಿಕ ಸಂದೇಶ) ನೀಡಿದ್ದಾನೆ. ಎಲ್ಲಿಯವರೆಗೆಂದರೆ, ಯಾರೊಬ್ಬನೂ ಇನ್ನೊಬ್ಬನ ಮೇಲೆ ಜಂಭ ಕೊಚ್ಚಿಕೊಳ್ಳಬಾರದು, ಮತ್ತು ಯಾರೊಬ್ಬನೂ ಇನ್ನೊಬ್ಬನ ಮೇಲೆ ಅತಿಕ್ರಮಣ ಮಾಡಬಾರದು."رواه مسلم
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ ಸತ್ಯವಿಶ್ವಾಸಿಯಾಗುವುದಿಲ್ಲ."متفق عليه
عن أبي هريرة رضي الله عنه عن رسول الله صلى الله عليه وسلم قال: «النَّاسُ مَعَادِن كَمَعَادِن الذَّهَب وَالفِضَّة، خِيَارُهُم فِي الجَاهِلِيَّة خِيَارُهُم فِي الإِسْلاَم إِذَا فَقُهُوا، والأَرْوَاحُ جُنُودٌ مُجَنَّدَة، فَمَا تَعَارَفَ مِنْهَا ائتَلَفَ، وَمَا تَنَاكَرَ مِنْهَا اخْتَلَفَ». وعن أبي هريرة رضي الله عنه قال: قال رسول الله -صلى الله عليه وسلم: «تَجِدُون النَّاسَ مَعَادِن: خِيَارُهُم فِي الجَاهِليَّة خِيَارُهُم فِي الإِسْلاَم إِذَا فَقِهُوا، وَتَجِدُون خِيَار النَّاس فِي هَذَا الشَّأْن أَشَدُّهُم كَرَاهِيَة لَه، وَتَجِدُون شَرَّ النَّاس ذَا الوَجْهَين، الَّذِي يَأْتِي هَؤُلاَء بِوَجه، وَهَؤُلاَء بِوَجْه».الحديث الأول: متفق عليه، ولفظه لمسلم؛ وروى البخاري أوله، وروى آخره عن عائشة -رضي الله عنها-. الحديث الثاني: متفق عليه
عن عبد الله بن عكيم رضي الله عنه مرفوعاً: «مَنْ تَعَلَّقَ شيئا وُكِلَ إليه».رواه أحمد والترمذي
عن ابن عباس حسبنا الله ونعم الوكيل: «قالها إبراهيم عليه السلام حين أُلقي في النار، وقالها محمد صلى الله عليه وسلم حين قالوا: {إن الناس قد جمعوا لكم فاخشوهم فزادهم إيمانا، وقالوا: حسبنا الله ونعم الوكيل} [آل عمران: 173]».رواه البخاري
عن جابر قال: قال رسول الله صلى الله عليه وسلم: «إذا قضى أحدكم الصلاة في مسجده فليجعل لبيته نصيبًا من صلاته، فإن الله جاعلٌ في بيته من صلاته خيرًا».رواه مسلم
ಸತ್ಯವಿಶ್ವಾಸಿಗಳ ಮಾತೆ ಉಮ್ಮ್ ಸಲಮಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದ್ದೇನೆ: "ಯಾವುದೇ ಒಬ್ಬ ಮುಸ್ಲಿಮನಿಗೆ ಒಂದು ಆಪತ್ತು ಸಂಭವಿಸಿದಾಗ, ಅವನು ಅಲ್ಲಾಹು ಆದೇಶಿಸಿದಂತೆ: 'ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್' (ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನ ಕಡೆಗೆ ಮರಳುವವರು) [ಸೂರ ಅಲ್-ಬಖರಾ: 156], 'ಅಲ್ಲಾಹುಮ್ಮ ಅ್‌ಜುರ್‌ನೀ ಫೀ ಮುಸೀಬತೀ, ವ ಅಖ್ಲಿಫ್ ಲೀ ಖೈರನ್ ಮಿನ್ಹಾ' (ಓ ಅಲ್ಲಾಹನೇ, ನನ್ನ ಆಪತ್ತಿನಲ್ಲಿ ನನಗೆ ಪ್ರತಿಫಲ ನೀಡು, ಮತ್ತು ನನಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡು) ಎಂದು ಹೇಳಿದರೆ, ಅಲ್ಲಾಹು ಅವನಿಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡದೇ ಇರಲಾರನು". ಅವರು (ಉಮ್ಮ್ ಸಲಮಾ) ಹೇಳಿದರು: "ಅಬೂ ಸಲಮಾ (ಅವರ ಪತಿ) ಮರಣ ಹೊಂದಿದಾಗ, ನಾನು (ಮನಸ್ಸಿನಲ್ಲಿ) ಅಂದುಕೊಂಡೆ: 'ಅಬೂ ಸಲಮಾಗಿಂತ ಉತ್ತಮ ಮುಸ್ಲಿಂ ಯಾರು? ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡೆಗೆ ಹಿಜ್ರತ್ (ವಲಸೆ) ಹೋದ ಮೊದಲ ಮನೆತನ (ಅವರದ್ದಾಗಿದೆ)'. ನಂತರ ನಾನು ಅದನ್ನು (ಆ ಪ್ರಾರ್ಥನೆಯನ್ನು) ಹೇಳಿದೆನು. ಆಗ ಅಲ್ಲಾಹು ನನಗೆ (ಅದಕ್ಕೆ ಬದಲಿಯಾಗಿ) ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಪತಿಯಾಗಿ) ನೀಡಿದನು".رواه مسلم