ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
Available in 60 languages
«ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು." (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ).
ಇನ್ನೊಂದು ವರದಿಯಲ್ಲಿ: "ನಿಶ್ಚಯವಾಗಿಯೂ ಅಲ್ಲಾಹು ಶಾಂತಿಯಾಗಿದ್ದಾನೆ. ಆದ್ದರಿಂದ ನಿಮ್ಮಲ್ಲೊಬ್ಬರು ನಮಾಝಿನಲ್ಲಿ ಕುಳಿತುಕೊಳ್ಳುವಾಗ ಹೀಗೆ ಹೇಳಲಿ: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ). ಹೀಗೆ ಹೇಳಿದರೆ ಭೂಮ್ಯಾಕಾಶಗಳಲ್ಲಿರುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಅದು ಅನ್ವಯಿಸುತ್ತದೆ. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ನಂತರ ಅವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು."»Meaning translation ·
Saved at original quality








