Hadith for the World
Tap the image to view it full size
ಜೀವನಚರಿತ್ರೆ ಮತ್ತು ಇತಿಹಾಸ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

Available in 56 languages
«ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತಃಪುರದಲ್ಲಿರುವ ಕನ್ಯೆಗಿಂತಲೂ ತೀವ್ರ ನಾಚಿಕೆಯನ್ನು ಹೊಂದಿದ್ದರು. ಅವರು ಅವರಿಗೆ ಇಷ್ಟವಿಲ್ಲದ ಏನನ್ನಾದರೂ ನೋಡಿದರೆ, ಅದನ್ನು ಅವರ ಮುಖದಲ್ಲಿ ನಾವು ಗುರುತಿಸುತ್ತಿದ್ದೆವು."»

Meaning translation ·

Explanation

The meaning in a few plain lines

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪುರುಷರು ಇರುವ ತನ್ನ ಮನೆಯಲ್ಲಿ ಪರ್ದಾ ಹಾಕಿ ಅಂತಃಪುರದಲ್ಲಿ ವಾಸಿಸುವ ಅವಿವಾಹಿತೆ, ಕನ್ಯೆ ಯುವತಿಗಿಂತಲೂ ತೀವ್ರವಾದ ನಾಚಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಂದಿದ್ದರು. ತನ್ನ ನಾಚಿಕೆಯ ತೀವ್ರತೆಯಿಂದಾಗಿ, ಅವರಿಗೆ ಒಂದು ವಸ್ತು ಇಷ್ಟವಾಗದಿದ್ದರೆ ಅವರ ಮುಖಭಾವ ಬದಲಾಗುತ್ತಿತ್ತು. ಅವರು ಅದನ್ನು ಹೇಳುತ್ತಿರಲಿಲ್ಲ. ಬದಲಿಗೆ, ಅವರಿಗೆ ಇಷ್ಟವಾಗಲಿಲ್ಲ ಎಂಬುದನ್ನು ಸಹಾಬಿಗಳು ಅವರ ಮುಖಭಾವದಿಂದ ಗ್ರಹಿಸುತ್ತಿದ್ದರು.

Source
متفق عليه
Download image

Saved at original quality