Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಉಮ್ಮು ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

Available in 40 languages
«ಉಮ್ಮು ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು ಕಟ್ಟುನಿಟ್ಟಾಗಿ ಹೇರಲಾಗಿರಲಿಲ್ಲ".»

Meaning translation ·

Explanation

The meaning in a few plain lines

ಉಮ್ಮು ಅತಿಯ್ಯಾ ಅಲ್-ಅನ್ಸಾರಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರಿಗೆ ಜನಾಝಾಗಳೊಂದಿಗೆ (ಮೃತದೇಹಗಳೊಂದಿಗೆ) ನಡೆಯುವುದನ್ನು ನಿಷೇಧಿಸಿದ್ದಾರೆ. ಇದಕ್ಕೆ ಕಾರಣ ಅವರಿಗೆ ಮತ್ತು ಅವರಿಂದ ಫಿತ್ನಾ (ಪ್ರಚೋದನೆ/ಪರೀಕ್ಷೆ) ಉಂಟಾಗುವ ಭಯವಾಗಿದೆ. ಅವರ ತಾಳ್ಮೆಯ ಕೊರತೆಯೂ ಅದಕ್ಕೆ ಒಂದು ಕಾರಣವಾಗಿದೆ. ನಂತರ ಅವರು (ಉಮ್ಮು ಅತಿಯ್ಯಾ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇತರ ನಿಷಿದ್ಧ ಕಾರ್ಯಗಳಲ್ಲಿ ಮಾಡುವಂತೆ ಈ ನಿಷೇಧದ ಬಗ್ಗೆ ಒತ್ತುಕೊಟ್ಟು ಹೇಳಿಲ್ಲ.

Source
متفق عليه
Download image

Saved at original quality