ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 53 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಹೇಳಿದನು: ಆದಮರ ಪುತ್ರ ಮಾಡುವ ಎಲ್ಲಾ ಕರ್ಮಗಳು ಅವನಿಗೇ ಆಗಿವೆ; ಉಪವಾಸದ ಹೊರತು. ಅದು ನನಗಾಗಿದೆ ಮತ್ತು ನಾನೇ ಅದಕ್ಕೆ ಪ್ರತಿಫಲವನ್ನು ನೀಡುತ್ತೇನೆ. ಉಪವಾಸವು ಗುರಾಣಿಯಾಗಿದೆ. ನಿಮ್ಮೆಲ್ಲೊಬ್ಬನು ಉಪವಾಸದಲ್ಲಿರುವಾಗ ಅಶ್ಲೀಲವಾಗಿ ವರ್ತಿಸದಿರಲಿ ಅಥವಾ ಉಚ್ಚ ಸ್ವರದಲ್ಲಿ ಮಾತನಾಡದಿರಲಿ. ಯಾರಾದರೂ ಅವನನ್ನು ದೂಷಿಸಿದರೆ ಅಥವಾ ಅವನೊಂದಿಗೆ ಜಗಳವಾಡಿದರೆ, ಅವನು "ನಾನು ಉಪವಾಸದಲ್ಲಿದ್ದೇನೆ" ಎಂದು ಹೇಳಲಿ. ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಉಪವಾಸಿಗನ ಬಾಯಿಯ ದುರ್ಗಂಧವು ಅಲ್ಲಾಹನ ಬಳಿ ಕಸ್ತೂರಿಗಿಂತಲೂ ಹೆಚ್ಚು ಪರಿಮಳವುಳ್ಳದ್ದಾಗಿದೆ. ಉಪವಾಸಿಗನಿಗೆ ಎರಡು ಸಂತೋಷಗಳಿದ್ದು ಅವನು ಆ ಸಂತೋಷಗಳನ್ನು ಆಸ್ವಾದಿಸುತ್ತಾನೆ: ಒಂದು: ಉಪವಾಸ ಪಾರಣೆ ಮಾಡುವಾಗ ದೊರೆಯುವ ಸಂತೋಷ, ಇನ್ನೊಂದು ಉಪವಾಸದ ಮೂಲಕ ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವಾಗ ದೊರೆಯುವ ಸಂತೋಷ."»Meaning translation ·
Saved at original quality








