Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 71 languages
«ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ: ಸಂಬಂಧಿಕರು ಒಳಿತು ಮಾಡಿದರೆ ಮಾತ್ರ ಒಳಿತು ಮಾಡುವವನು, ಪೂರ್ಣ ರೂಪದಲ್ಲಿ ಕುಟುಂಬ ಸಂಬಂಧವನ್ನು ಜೋಡಿಸುವವನಲ್ಲ ಮತ್ತು ಸಂಬಂಧಿಕರಿಗೆ ಒಳಿತು ಮಾಡುವವನಲ್ಲ. ಬದಲಿಗೆ, ನಿಜವಾದ ಮತ್ತು ಪೂರ್ಣ ರೂಪದಲ್ಲಿ ಸಂಬಂಧ ಜೋಡಿಸುವವನು ಯಾರೆಂದರೆ, ಸಂಬಂಧಿಕನು ಸಂಬಂಧ ಕಡಿದರೂ ಅವನೊಂದಿಗೆ ಸಂಬಂಧ ಜೋಡಿಸುವವನು ಮತ್ತು ಸಂಬಂಧಿಕರು ಕೆಟ್ಟದಾಗಿ ವರ್ತಿಸಿದರೂ ಅವರೊಡನೆ ಉತ್ತಮವಾಗಿ ವರ್ತಿಸುವವನಾಗಿದ್ದಾನೆ.

Source
رواه البخاري
Download image

Saved at original quality