Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 47 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಲೌಕಿಕ ವಿಷಯಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿರಿ. ಏಕೆಂದರೆ, ಅಲ್ಲಾಹು ನಿಮಗೆ ನೀಡಿದ ಅನುಗ್ರಹಗಳನ್ನು ನೀವು ಕೀಳಾಗಿ ಕಾಣದಿರಲು ಇದು ಹೆಚ್ಚು ಸೂಕ್ತವಾಗಿದೆ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮುಸಲ್ಮಾನನಿಗೆ ಆದೇಶಿಸುವುದೇನೆಂದರೆ, ಅವನು ಲೌಕಿಕ ವಿಷಯಗಳಲ್ಲಿ - ಸ್ಥಾನಮಾನ, ಸಂಪತ್ತು, ಪ್ರತಿಷ್ಠೆ ಇತ್ಯಾದಿಗಳಲ್ಲಿ - ತನ್ನ ಸ್ಥಿತಿಗಿಂತ ಕೆಳಗಿರುವವರನ್ನು ಮತ್ತು ಕಡಿಮೆ ಇರುವವರನ್ನು ನೋಡಬೇಕು, ಮತ್ತು ಲೌಕಿಕ ವಿಷಯಗಳಲ್ಲಿ ತನಗಿಂತ ಮೇಲಿರುವವರನ್ನು ಮತ್ತು ಉತ್ತಮ ಸ್ಥಿತಿಯಲ್ಲಿರುವವರನ್ನು ನೋಡಬಾರದು. ಏಕೆಂದರೆ, ಕೆಳಗಿರುವವರನ್ನು ನೋಡುವುದು, ಅಲ್ಲಾಹು ನಿಮಗೆ ನೀಡಿದ ಅನುಗ್ರಹವನ್ನು ನೀವು ಕೀಳಾಗಿ ಕಾಣದಿರಲು ಮತ್ತು ತಿರಸ್ಕರಿಸದಿರಲು ಹೆಚ್ಚು ಅರ್ಹ ಮತ್ತು ಸೂಕ್ತವಾಗಿದೆ.

Source
متفق عليه
Download image

Saved at original quality