ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಅಬ್ದುರ್‍ರಹ್ಮಾನ್ ಬಿನ್ ಅಬೂ ಲೈಲಾ ರಿಂದ ವರದಿ. ಅವರು ಹೇಳಿದರು: ಕಅಬ್ ಬಿನ್ ಉಜ್ರ ನನ್ನನ್ನು ಭೇಟಿಯಾಗಿ ಕೇಳಿದರು: "ನಾನು ನಿಮಗೆ ಒಂದು ಉಡುಗೊರೆಯನ್ನು ನೀಡಲೇ?
Available in 60 languages
«ಅಬ್ದುರ್‍ರಹ್ಮಾನ್ ಬಿನ್ ಅಬೂ ಲೈಲಾ ರಿಂದ ವರದಿ. ಅವರು ಹೇಳಿದರು: ಕಅಬ್ ಬಿನ್ ಉಜ್ರ ನನ್ನನ್ನು ಭೇಟಿಯಾಗಿ ಕೇಳಿದರು: "ನಾನು ನಿಮಗೆ ಒಂದು ಉಡುಗೊರೆಯನ್ನು ನೀಡಲೇ? ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಬಳಿಗೆ ಬಂದಾಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಿಮಗೆ ಹೇಗೆ ಸಲಾಂ ಹೇಳುವುದೆಂದು ನಮಗೆ ತಿಳಿದಿದೆ. ಆದರೆ ನಾವು ನಿಮ್ಮ ಮೇಲೆ ಸಲಾತ್ ಹೇಳುವುದು ಹೇಗೆ?" ಅವರು ಹೇಳಿದರು: "ಹೇಳಿರಿ: ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ. ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ."»Meaning translation ·
Saved at original quality








