ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಅಬ್ದುಲ್ಲಾ ಬಿನ್ ಸಲಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಆಗಮಿಸಿದಾಗ ಜನರೆಲ್ಲರೂ, "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು" ಎಂದು ಮೂರು ಸಲ ಕೂಗುತ್ತಾ ಅವರ ಸುತ್ತಲೂ ನೆರೆದರು. ನಾನು ಕೂಡ ಜನರೊಂದಿಗೆ ಅವರನ್ನು ನೋಡಲು ಬಂದೆ. ನಾನು ಅವರ ಮುಖವನ್ನು ಸ್ಪಷ್ಟವಾಗಿ ನೋಡಿದಾಗ ಅವರ ಮುಖವು ಸುಳ್ಳುಗಾರನ ಮುಖವಲ್ಲ ಎಂದು ನನಗೆ ಮನವರಿಕೆಯಾಯಿತು. ನಾನು ಅವರಿಂದ ಆಲಿಸಿದ ಪ್ರಪ್ರಥಮ ವಾಕ್ಯವು ಅವರ ಈ ಮಾತಾಗಿತ್ತು:
Available in 55 languages
«ಅಬ್ದುಲ್ಲಾ ಬಿನ್ ಸಲಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಆಗಮಿಸಿದಾಗ ಜನರೆಲ್ಲರೂ, "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು" ಎಂದು ಮೂರು ಸಲ ಕೂಗುತ್ತಾ ಅವರ ಸುತ್ತಲೂ ನೆರೆದರು. ನಾನು ಕೂಡ ಜನರೊಂದಿಗೆ ಅವರನ್ನು ನೋಡಲು ಬಂದೆ. ನಾನು ಅವರ ಮುಖವನ್ನು ಸ್ಪಷ್ಟವಾಗಿ ನೋಡಿದಾಗ ಅವರ ಮುಖವು ಸುಳ್ಳುಗಾರನ ಮುಖವಲ್ಲ ಎಂದು ನನಗೆ ಮನವರಿಕೆಯಾಯಿತು. ನಾನು ಅವರಿಂದ ಆಲಿಸಿದ ಪ್ರಪ್ರಥಮ ವಾಕ್ಯವು ಅವರ ಈ ಮಾತಾಗಿತ್ತು: "ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ."»Meaning translation ·
Saved at original quality








