ಅಕೀದಾ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 40 languages
«ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನಿಮಗೆ ಮೂರು ವಿಷಯಗಳನ್ನು ಇಷ್ಟಪಡುತ್ತಾನೆ ಮತ್ತು ನಿಮಗೆ ಮೂರು ವಿಷಯಗಳನ್ನು ದ್ವೇಷಿಸುತ್ತಾನೆ. ಅವನು ನಿಮಗೆ ಇಷ್ಟಪಡುವ ವಿಷಯಗಳೆಂದರೆ: ನೀವು ಅವನನ್ನು (ಮಾತ್ರ) ಆರಾಧಿಸುವುದು ಹಾಗೂ ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡದಿರುವುದು, ನೀವೆಲ್ಲರೂ ಒಗ್ಗೂಡಿ ಅಲ್ಲಾಹನ ಹಗ್ಗವನ್ನು (ಧರ್ಮವನ್ನು) ಗಟ್ಟಿಯಾಗಿ ಹಿಡಿದುಕೊಳ್ಳುವುದು ಮತ್ತು ನೀವು ಭಿನ್ನರಾಗದಿರುವುದು. ಅವನು ನಿಮಗೆ ದ್ವೇಷಿಸುವ ವಿಷಯಗಳೆಂದರೆ: 'ಹೀಗೆ ಹೇಳಲಾಯಿತು ಹಾಗೆ ಹೇಳಲಾಯಿತು' ಎಂಬ ಅನಗತ್ಯ ಮಾತುಗಳನ್ನು ಹೇಳುವುದು, ಅತಿಯಾದ ಪ್ರಶ್ನೆಗಳನ್ನು ಕೇಳುವುದು, ಮತ್ತು ಸಂಪತ್ತನ್ನು ವ್ಯರ್ಥ ಮಾಡುವುದು".»Meaning translation ·
Saved at original quality








