Hadith for the World
Tap the image to view it full size
ಜೀವನಚರಿತ್ರೆ ಮತ್ತು ಇತಿಹಾಸ

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: (ಪ್ರವಾದಿಯವರಿಗೆ) ಹೀಗೆ ಹೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ, ಬಹುದೇವಾರಾಧಕರ ವಿರುದ್ಧ ಪ್ರಾರ್ಥಿಸಿ." ಆಗ ಅವರು (ಪ್ರವಾದಿ) ಹೇಳಿದರು:

Available in 31 languages
«ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: (ಪ್ರವಾದಿಯವರಿಗೆ) ಹೀಗೆ ಹೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ, ಬಹುದೇವಾರಾಧಕರ ವಿರುದ್ಧ ಪ್ರಾರ್ಥಿಸಿ." ಆಗ ಅವರು (ಪ್ರವಾದಿ) ಹೇಳಿದರು: "ನಾನು ಶಪಿಸುವವನಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಕರುಣೆಯಾಗಿ ಕಳುಹಿಸಲ್ಪಟ್ಟಿದ್ದೇನೆ."»

Meaning translation ·

Explanation

The meaning in a few plain lines

ಅಲ್ಲಾಹನಿಗೆ ಪಾಲುದಾರರನ್ನು ಸೇರಿಸುವವರ (ಬಹುದೇವಾರಾಧಕರ) ವಿರುದ್ಧ ಪ್ರಾರ್ಥಿಸುವಂತೆ (ಅವರನ್ನು ಶಪಿಸುವಂತೆ) ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೋರಲಾಯಿತು. ಆಗ ಅವರು ಹೇಳಿದರು: "ನಾನು ಜನರನ್ನು ಅಲ್ಲಾಹನ ಕರುಣೆಯಿಂದ ದೂರವಾಗುವಂತೆ ಮತ್ತು ಹೊರಹಾಕುವಂತೆ ಪ್ರಾರ್ಥಿಸಲು 'ಶಪಿಸುವವನಾಗಿ' ಅಲ್ಲಾಹನಿಂದ ಕಳುಹಿಸಲ್ಪಟ್ಟಿಲ್ಲ; (ಹಾಗೆ ಮಾಡಿ) ನಾನು ಅವರನ್ನು ಒಳಿತಿನಿಂದ ದೂರಗೊಳಿಸುವುದಿಲ್ಲ. ನಾನು ಇದಕ್ಕಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಸಾಮಾನ್ಯವಾಗಿ ಎಲ್ಲ ಜನರಿಗೂ, ಮತ್ತು ವಿಶೇಷವಾಗಿ ಸತ್ಯವಿಶ್ವಾಸಿಗಳಿಗೆ ಒಳಿತು ಹಾಗೂ ಕರುಣೆಗೆ ಕಾರಣವಾಗಲು ಕಳುಹಿಸಲ್ಪಟ್ಟಿದ್ದೇನೆ."

Source
رواه مسلم
Download image

Saved at original quality