KN
Muhammadan Qualities
Prophet's Guidance
7 hadiths
Prophet's Guidance on Purification
1
Prophet's Guidance on Prayer
1
Prophet's Guidance on Marriage and Treating One's Wife
1
7 hadiths
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
متفق عليه
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು."
متفق عليه
ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಾಬರಿಯಿಂದ ಅವರ ಬಳಿಗೆ ಬಂದು ಹೇಳತೊಡಗಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಝೈನಬ್ ಬಿಂತ್ ಜಹ್ಶ್ ಹೇಳಿದರು: "ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲಿ ನೀತಿವಂತರು ಇರುವಾಗ ನಾವು ನಾಶವಾಗುವೆವೇ?" ಅವರು ಉತ್ತರಿಸಿದರು: "ಹೌದು, ಕೆಡುಕು ಹೆಚ್ಚಾದಾಗ."
متفق عليه
عن عائشة رضي الله عنها قالت: كان رسولُ اللهِ صلى الله عليه وسلم إذا فَاتَتْهُ الصَّلَاةُ مِنَ الليلِ مِن وَجَعٍ أَوْ غَيْرِهِ، صَلَّى من النَّهَارِ ثِنْتَيْ عَشْرَةَ رَكْعَةً.
رواه مسلم
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಲ್ಲಿ ಕೆಲವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖಾಸಗಿ ಜೀವನದ ಬಗ್ಗೆ ಅವರ ಪತ್ನಿಯರಲ್ಲಿ ಕೇಳಿದರು. ನಂತರ ಅವರಲ್ಲಿ ಒಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಸ್ತ್ರೀಯರನ್ನು ಮದುವೆಯಾಗುವುದಿಲ್ಲ." ಅವರಲ್ಲಿ ಇನ್ನೊಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಮಾಂಸವನ್ನು ತಿನ್ನುವುದಿಲ್ಲ." ಅವರಲ್ಲಿ ಮತ್ತೊಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಹಾಸಿಗೆಯ ಮೇಲೆ ಮಲಗುವುದಿಲ್ಲ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನನ್ನು ಸ್ತುತಿಸಿ ಹೇಳಿದರು: "ಕೆಲವು ಜನರಿಗೆ ಏನಾಗಿದೆ? ಅವರೇಕೆ ಹೀಗೆ ಹೀಗೆ ಹೇಳುತ್ತಿದ್ದಾರೆ? ಆದರೆ, ನಾನು ನಮಾಝ್ ಮಾಡುತ್ತೇನೆ ಮತ್ತು ಮಲಗುತ್ತೇನೆ, ಉಪವಾಸ ಆಚರಿಸುತ್ತೇನೆ ಮತ್ತು ಆಚರಿಸದೆ ಇರುತ್ತೇನೆ, ಹಾಗೂ ಸ್ತ್ರೀಯರನ್ನು ಮದುವೆಯಾಗುತ್ತೇನೆ. ಯಾರು ನನ್ನ ಸುನ್ನತ್ನಿಂದ ವಿಮುಖರಾಗುತ್ತಾರೋ ಅವರು ನನ್ನವರಲ್ಲ."
متفق عليه
عَنْ أَنَسِ بْنِ مَالِكٍ رَضِيَ اللَّهُ عَنْهُ قَالَ: إِنَّ خَيَّاطًا دَعَا رَسُولَ اللَّهِ صَلَّى اللهُ عَلَيْهِ وَسَلَّمَ لِطَعَامٍ صَنَعَهُ، قَالَ أَنَسُ بْنُ مَالِكٍ: فَذَهَبْتُ مَعَ رَسُولِ اللَّهِ صَلَّى اللهُ عَلَيْهِ وَسَلَّمَ إِلَى ذَلِكَ الطَّعَامِ، فَقَرَّبَ إِلَى رَسُولِ اللَّهِ صَلَّى اللهُ عَلَيْهِ وَسَلَّمَ خُبْزًا وَمَرَقًا، فِيهِ دُبَّاءٌ وَقَدِيدٌ، فَرَأَيْتُ النَّبِيَّ صَلَّى اللهُ عَلَيْهِ وَسَلَّمَ يَتَتَبَّعُ الدُّبَّاءَ مِنْ حَوَالَيِ القَصْعَةِ، قَالَ: فَلَمْ أَزَلْ أُحِبُّ الدُّبَّاءَ مِنْ يَوْمِئِذٍ.
متفق عليه
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: (ಪ್ರವಾದಿಯವರಿಗೆ) ಹೀಗೆ ಹೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ, ಬಹುದೇವಾರಾಧಕರ ವಿರುದ್ಧ ಪ್ರಾರ್ಥಿಸಿ." ಆಗ ಅವರು (ಪ್ರವಾದಿ) ಹೇಳಿದರು: "ನಾನು ಶಪಿಸುವವನಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಕರುಣೆಯಾಗಿ ಕಳುಹಿಸಲ್ಪಟ್ಟಿದ್ದೇನೆ."
رواه مسلم