KN
Prophet's Guidance
Prophet's Guidance on Marriage and Treating One's Wife
1 hadiths
Prophet's Guidance on Purification
1
Prophet's Guidance on Prayer
1
Prophet's Guidance on Marriage and Treating One's Wife
1
1 hadiths
ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಾಬರಿಯಿಂದ ಅವರ ಬಳಿಗೆ ಬಂದು ಹೇಳತೊಡಗಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಝೈನಬ್ ಬಿಂತ್ ಜಹ್ಶ್ ಹೇಳಿದರು: "ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲಿ ನೀತಿವಂತರು ಇರುವಾಗ ನಾವು ನಾಶವಾಗುವೆವೇ?" ಅವರು ಉತ್ತರಿಸಿದರು: "ಹೌದು, ಕೆಡುಕು ಹೆಚ್ಚಾದಾಗ."
متفق عليه