Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

Available in 48 languages
«ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಹದೀಸ್‌ಗಳನ್ನು ಕೇಳಿ ಅದನ್ನು ಇತರರಿಗೆ ತಲುಪಿಸುವವರೆಗೆ ನೆನಪಿಟ್ಟುಕೊಳ್ಳುವ ವ್ಯಕ್ತಿಯು ಈ ಜಗತ್ತಿನಲ್ಲಿ ಪ್ರಕಾಶಮಾನವಾಗಿರಲಿ, ಸಂತೋಷದಿಂದಿರಲಿ ಮತ್ತು ಸುಂದರವಾಗಿರಲಿ, ಮತ್ತು ಅಲ್ಲಾಹನು ಅವನನ್ನು ಪರಲೋಕದಲ್ಲಿ ಸ್ವರ್ಗದ ಪ್ರಕಾಶಮಾನತೆ, ಆನಂದ ಮತ್ತು ಸೌಂದರ್ಯಕ್ಕೆ ಸೇರಿಸಲಿ ಎಂದು ಪ್ರಾರ್ಥಿಸಿದರು. ಏಕೆಂದರೆ ಕೆಲವೊಮ್ಮೆ ಹದೀಸ್ ಅನ್ನು ತಲುಪಿಸಿದ ವ್ಯಕ್ತಿಗಿಂತ ಅದನ್ನು ಸ್ವೀಕರಿಸಿದ ವ್ಯಕ್ತಿಯು ಹೆಚ್ಚು ಗ್ರಹಿಸುವವನು, ಹೆಚ್ಚು ಜ್ಞಾನವುಳ್ಳವನು ಮತ್ತು ಹದೀಸ್‌ನಿಂದ ನಿಯಮಗಳನ್ನು ಸಂಶೋಧಿಸುವುದರಲ್ಲಿ ಹೆಚ್ಚು ಸಮರ್ಥನಾಗಿರಬಹುದು. ಮೊದಲನೆಯವನು ನೆನಪಿಟ್ಟುಕೊಳ್ಳುವುದು ಮತ್ತು ತಲುಪಿಸುವುದರಲ್ಲಿ ಪರಿಣಿತನಾಗಿರಬಹುದು ಮತ್ತು ಎರಡನೆಯವನು ಅರ್ಥಮಾಡಿಕೊಳ್ಳುವುದು ಮತ್ತು ನಿಯಮಗಳನ್ನು ಸಂಶೋಧಿಸುವುದರಲ್ಲಿ ಪರಿಣಿತನಾಗಿರಬಹುದು.

Source
رواه الترمذي وابن ماجه وأحمد
Download image

Saved at original quality