Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 48 languages
«ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು ಮೈಲಿಗಳು. ಸತ್ಯವಿಶ್ವಾಸಿಗೆ ಅದರಲ್ಲಿ ಪತ್ನಿಯರು ಇರುತ್ತಾರೆ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ. ಆದರೆ ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವರ್ಗದ ಕೆಲವು ಸುಖಗಳ ಬಗ್ಗೆ ತಿಳಿಸಿದ್ದಾರೆ. ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಬಹಳ ದೊಡ್ಡದಾದ, ಒಳಗೆ ವಿಶಾಲವಾದ, ಒಂದೇ ಮುತ್ತಿನಿಂದ ಮಾಡಿದ ಒಳಗೆ ಟೊಳ್ಳಾದ ಗುಡಾರವಿರುತ್ತದೆ. ಅದರ ಅಗಲ ಮತ್ತು ಉದ್ದ ಆಕಾಶದಲ್ಲಿ ಅರವತ್ತು ಮೈಲಿಗಳು. ಅದರ ನಾಲ್ಕು ಮೂಲೆಗಳ ಪ್ರತಿಯೊಂದು ಬದಿಯಲ್ಲಿ, ದಿಕ್ಕಿನಲ್ಲಿ ಮತ್ತು ಕೋನದಲ್ಲಿ ಅವನಿಗೆ ಪತ್ನಿಯರಿರುತ್ತಾರೆ. ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ.

Source
متفق عليه
Download image

Saved at original quality