Hadith for the World

All hadiths

The complete card collection, filter by chapter

655 hadiths

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?" ಅವರು ಉತ್ತರಿಸಿದರು: "ಅವನ ದೇಹದಲ್ಲಿ ಯಾವುದೇ ಕೊಳೆ ಉಳಿಯಲಾರದು." ಅವರು (ಪ್ರವಾದಿ) ಹೇಳಿದರು: "ಅದು ಐದು ವೇಳೆಯ ನಮಾಝಿನ ಉದಾಹರಣೆಯಾಗಿದೆ. ಅದರ ಮೂಲಕ ಅಲ್ಲಾಹು ಪಾಪಗಳನ್ನು ಅಳಿಸುತ್ತಾನೆ."متفق عليه
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗವು ನೋವಿನಿಂದ ಬಳಲುವಾಗ, ದೇಹದ ಉಳಿದೆಲ್ಲಾ ಭಾಗಗಳು ನಿದ್ರಾಹೀನತೆ ಮತ್ತು ಜ್ವರದ ಮೂಲಕ ಅದಕ್ಕೆ ಸ್ಪಂದಿಸುತ್ತವೆ."متفق عليه
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಪ್ರವಾದಿಯು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಕಷ್ಟದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಪರಮ ಶ್ರೇಷ್ಠನು ಮತ್ತು ಸಹನಶೀಲನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಭವ್ಯ ಸಿಂಹಾಸನದ ಒಡೆಯನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಆಕಾಶಗಳ ಒಡೆಯನು, ಭೂಮಿಯ ಒಡೆಯನು ಮತ್ತು ಉದಾತ್ತ ಅರ್ಶ್ (ಸಿಂಹಾಸನ) ನ ಒಡೆಯನು."متفق عليه
عن عائشة رضي الله عنها قالت: « خَسَفَتِ الشمس على عهد رسول الله صلى الله عليه وسلم فصَلَّى رسول الله صلى الله عليه وسلم بالناس. فأطال القيام، ثم ركع، فأطال الركوع، ثم قام، فأطال القيام -وهو دون القيام الأول- ثم ركع، فأطال الركوع -وهو دون الركوع الأول- ثم رفع فأطال القيام -وهو دون القيام الأول- ثم سجد، فأطال السجود، ثم فعل في الركعة الأخرى مثل ما فَعَل في الرَّكعة الأولى، ثم انصرف، وقد تَجَلَّتْ الشمس، فخَطَب الناس، فحَمِد الله وأَثْنَى عليه، ثُمَّ قال: إِنَّ الشَّمس والقمَر آيَتَان مِن آيات الله، لا ينْخَسِفَانِ لموت أحد ولا لِحَيَاته، فَإِذا رَأَيتُم ذلك فَادْعُوا اللَّه وكَبِّرُوا ، وصَلُّوا وتَصَدَّقُوا. ثم قال: يا أُمَّة مُحمَّد، واللهِ ما من أحد أغْيَرُ من الله أن يَزْنِيَ عبده أو تَزْنِيَ أَمَتُهُ. يا أُمَّةَ محمد، والله لو تعلمون ما أعلم لَضَحِكْتُمْ قليلا ولَبَكَيْتم كثيرا». وفي لفظ: «فاسْتَكَمَل أَرْبَع رَكَعَاتٍ وَأَرْبَع سَجَدَاتٍ».متفق عليه
عن عائشة رضي الله عنها قالت: «من كلِّ الليل أَوْتَرَ رسول الله صلى الله عليه وسلم : من أول الليل، وأوسطه، وآخره، وانتهى وِتْرُهُ إلى السَّحَرِ».متفق عليه
ಅಮ್ರ್ ಬಿನ್ ಶುಐಬ್ ರಿಂದ, ಅವರು ಅವರ ತಂದೆಯಿಂದ, ಅವರು ಅವರ ತಾತನಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ."رواه أبو داود
عن عبد الله بن زيد بن عَاصِم المازِنِي رضي الله عنه قال: «خرج النبي صلى الله عليه وسلم يَسْتَسْقِي، فتَوَجَّه إلى القبلة يدْعو، وحَوَّل رِدَاءه، ثم صلَّى ركعتين، جَهَرَ فيهما بالقِراءة». وفي لفظ «إلى الْمُصَلَّى».متفق عليه
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು ಪ್ರವೇಶಿಸುತ್ತಾನೆ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಪರದೂಷಣೆ ಏನೆಂದು ನಿಮಗೆ ತಿಳಿದಿದೆಯೇ?” ಅನುಯಾಯಿಗಳು ಉತ್ತರಿಸಿದರು: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “(ಪರದೂಷಣೆ ಎಂದರೆ) ನಿನ್ನ ಸಹೋದರನ ಬಗ್ಗೆ ಅವನಿಗೆ ಇಷ್ಟವಿಲ್ಲದ ಮಾತನ್ನು ಹೇಳುವುದು.” ಆಗ ಒಬ್ಬರು ಕೇಳಿದರು: “ಒಂದು ವೇಳೆ ನಾನು ಹೇಳುವ ಸಂಗತಿ ಅವನಲ್ಲಿದ್ದರೆ?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: “ಅದು ಅವನಲ್ಲಿದ್ದರೆ ನೀನು ಅವನ ಬಗ್ಗೆ ಪರದೂಷಣೆ ಮಾಡಿರುವೆ. ಅದು ಅವನಲ್ಲಿಲ್ಲದಿದ್ದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿರುವೆ.”رواه مسلم
عن ابن عمر رضي الله عنهما مرفوعا: «الظلم ظلمات يوم القيامة». عن جابر رضي الله عنهما مرفوعا: «اتقوا الظلم، فإن الظلم ظلمات يوم القيامة، واتقوا الشُّحَ؛ فإنه أَهْلَكَ من كان قبلكم».حديث ابن عمر -رضي الله عنهما-: متفق عليه. حديث جابر -رضي الله عنه-: رواه مسلم
ಖೌಲ ಅನ್ಸಾರಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ನಿಶ್ಚಯವಾಗಿಯೂ ಅಲ್ಲಾಹನ ಆಸ್ತಿಯಲ್ಲಿ ಲಂಗು-ಲಗಾಮಿಲ್ಲದೆ ವ್ಯವಹರಿಸುವ ಜನರು ಯಾರೋ ಅವರಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಿದೆ.”رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದರೆ ಗುಮಾನಿಯು ಅತಿದೊಡ್ಡ ಸುಳ್ಳು ಮಾತಾಗಿದೆ. ನೀವು ಒಬ್ಬರನ್ನೊಬ್ಬರು ಬೇಹುಗಾರಿಕೆ ಮಾಡಬೇಡಿ, ಒಬ್ಬರು ಇನ್ನೊಬ್ಬರ ಖಾಸಗಿ ವಿಚಾರಗಳನ್ನು ಕೆದಕಬೇಡಿ, ಒಬ್ಬರನ್ನೊಬ್ಬರು ಅಸೂಯೆ ಪಡಬೇಡಿ, ಒಬ್ಬರಿಗೊಬ್ಬರು ಮುಖ ತಿರುಗಿಸಬೇಡಿ, ಒಬ್ಬರನ್ನೊಬ್ಬರು ದ್ವೇಷಿಸಬೇಡಿ. ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ."متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ."متفق عليه
عن عبد الله بن مسعود رضي الله عنه قال: قال رسول الله صلى الله عليه وسلم : "إذا كنتم ثلاثة فلا يتناجى اثنان دون الآخَر، حتى تختلطوا بالناس؛ من أجل أن ذلك يحُزنه".متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಲೌಕಿಕ ವಿಷಯಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿರಿ. ಏಕೆಂದರೆ, ಅಲ್ಲಾಹು ನಿಮಗೆ ನೀಡಿದ ಅನುಗ್ರಹಗಳನ್ನು ನೀವು ಕೀಳಾಗಿ ಕಾಣದಿರಲು ಇದು ಹೆಚ್ಚು ಸೂಕ್ತವಾಗಿದೆ."متفق عليه
عن أنس بن مالك رضي الله عنه قال: قال رسول الله صلى الله عليه وسلم : «كلُّ بني آدم خَطَّاءٌ، وخيرُ الخَطَّائِينَ التوابون».رواه الترمذي وابن ماجه والدارمي وأحمد
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಂದಿಗೆ ಹೇಳಿದರು: "ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಕುಸ್ತಿಯಲ್ಲಿ ಗೆಲ್ಲುವವನು ಬಲಶಾಲಿಯಲ್ಲ. ಕೋಪ ಬರುವಾಗ ಮನಸ್ಸನ್ನು ನಿಗ್ರಹಿಸುವವನೇ (ನಿಜವಾದ) ಬಲಶಾಲಿ.”متفق عليه
عن أبي هريرة رضي الله عنه مرفوعاً: "لِيُسَلِّمِ الصغيرُ على الكبيرِ، والمارُّ على القاعدِ، والقليلُ على الكثيرِ" وفي رواية: "والراكبُ على الماشي".متفق عليه
ಅಬೂ ಮಸ್‌ಊದ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸುಸ್ತಾಗಿಬಿಟ್ಟಿದೆ. ಆದ್ದರಿಂದ ನನಗೆ ಸವಾರಿ ಮಾಡುವ ಒಂದು ಒಂಟೆಯನ್ನು ಕೊಡಿ." ಅವರು ಹೇಳಿದರು: "ನನ್ನ ಬಳಿ ಒಂಟೆಯಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆ ಕೊಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಳಿತನ್ನು ತೋರಿಸಿಕೊಡುತ್ತಾರೋ ಅವನಿಗೆ ಆ ಒಳಿತು ಮಾಡಿದ ವ್ಯಕ್ತಿಗೆ ದೊರಕುವಷ್ಟೇ ಪ್ರತಿಫಲ ದೊರಕುತ್ತದೆ."رواه مسلم
عن علي بن أبي طالب رضي الله عنه مرفوعاً: «إذا انْتَعَل أحدكم فليبدأ باليمين، وإذا نَزَعَ فليبدأ بالشمال، ولْتَكُن اليُمنى أولَهُما تُنْعَل، وآخِرَهُما تُنْزَع».متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದೆ: "ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ಪಾಪ ಯಾವುದು?" ಅವರು ಉತ್ತರಿಸಿದರು: "ಅಲ್ಲಾಹು ನಿನ್ನನ್ನು ಸೃಷ್ಟಿಸಿದವನಾಗಿದ್ದೂ ಸಹ ನೀನು ಅವನೊಂದಿಗೆ ಇತರರನ್ನು ಸರಿಸಾಟಿಯಾಗಿ ಮಾಡುವುದು." ನಾನು ಹೇಳಿದೆ: "ಅದು ನಿಜಕ್ಕೂ ಗಂಭೀರ ಪಾಪವಾಗಿದೆ." ನಾನು ಕೇಳಿದೆ: " ನಂತರ ಯಾವುದು?" ಅವರು ಉತ್ತರಿಸಿದರು: "ನಿನ್ನ ಜೊತೆಗೆ ಆಹಾರ ಸೇವಿಸುವನು ಎಂಬ ಭಯದಿಂದ ನೀನು ನಿನ್ನ ಮಗುವನ್ನು ಹತ್ಯೆ ಮಾಡುವುದು." ನಾನು ಕೇಳಿದೆ: "ನಂತರ ಯಾವುದು?" ಅವರು ಉತ್ತರಿಸಿದರು: "ನಿನ್ನ ನೆರೆಮನೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದು."متفق عليه
عن عبد الله بن عمرو بن العاص رضي الله عنهما مرفوعاً: "كُلُوا، وَاشْرَبُوا، وَتَصَدَّقُوا، وَالْبَسُوا، غَيْرَ مَخِيلَة، وَلَا سَرَف".رواه ابن ماجه والإمام أحمد، وذكره البخاري في صحيحه تعليقًا مجزومًا به
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”رواه البخاري