Hadith for the World
Jurisprudence of Acts of Worship

ಶುದ್ಧೀಕರಣ

18 hadiths

18 hadiths

ಮುಗೀರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಆಗ ನಾನು ಅವರ ಪಾದರಕ್ಷೆಗಳನ್ನು ಕಳಚಲು ಮುಂದಾದೆ. ಆಗ ಅವರು ಹೇಳಿದರು: "ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ." ನಂತರ ಅವರು ಅವುಗಳ ಮೇಲೆ ಸವರಿದರು.متفق عليه
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು."متفق عليه
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸ್ಲಿಂ ದಾಸನು - ಅಥವಾ ಸತ್ಯವಿಶ್ವಾಸಿಯು - ವುಝೂ (ಶುದ್ಧೀಕರಣ) ಮಾಡಿ, ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ ನೋಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಮುಖದಿಂದ ಹೊರಬರುತ್ತದೆ. ಅವನು ತನ್ನ ಕೈಗಳನ್ನು ತೊಳೆದಾಗ, ಅವನ ಕೈಗಳಿಂದ ಮಾಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಕೈಗಳಿಂದ ಹೊರಬರುತ್ತದೆ. ಅವನು ತನ್ನ ಕಾಲುಗಳನ್ನು ತೊಳೆದಾಗ, ಅವನ ಕಾಲುಗಳಿಂದ ನಡೆದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಕಾಲುಗಳಿಂದ ಹೊರಬರುತ್ತದೆ. ಎಷ್ಟರವರೆಗೆಂದರೆ ಅವನು ಪಾಪಗಳಿಂದ ಶುದ್ಧನಾಗಿ ಹೊರಬರುವವರೆಗೆ."رواه مسلم
عن أبي هريرة رضي الله عنه مرفوعًا: «إِذَا لَبِسْتُم، وَإِذَا تَوَضَّأتُم، فَابْدَأُوا بَأَيَامِنُكُم».رواه أبو داود واللفظ له، والترمذي وابن ماجه وأحمد
عن أبي هريرة رضي الله عنه قال قال رسول الله صلى الله عليه وسلم : ((إن أمتي يُدْعَون يوم القيامة غُرًّا مُحَجَلِّين من آثار الوُضُوء)). فمن اسْتَطَاع منكم أن يُطِيل غُرَّتَه فَليَفعل. وفي لفظ لمسلم: ((رأَيت أبا هريرة يتوضَّأ، فغسل وجهه ويديه حتى كاد يبلغ المنكبين، ثم غسل رجليه حتى رَفَع إلى السَّاقين، ثم قال: سمعت رسول الله صلى الله عليه وسلم يقول: إنَّ أمتي يُدْعَون يوم القيامة غُرًّا مُحَجَّلِين من آثار الوُضُوء)) فمن استطاع منكم أن يطيل غُرَّتَه وتَحْجِيلَه فَليَفعَل. وفي لفظ لمسلم: سمعت خليلي صلى الله عليه وسلم يقول: ((تَبْلُغ الحِليَة من المؤمن حيث يبلغ الوُضُوء)).الرواية الأولى: متفق عليه. الرواية الثانية: رواها مسلم. الرواية الثالثة: رواها مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ."متفق عليه
ಶುರೈಹ್ ಬಿನ್ ಹಾನಿಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾನು ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಏನು ಮಾಡುತ್ತಿದ್ದರು?" ಅವರು ಹೇಳಿದರು: "ಮಿಸ್ವಾಕ್ (ಹಲ್ಲುಗಳನ್ನು ಸ್ವಚ್ಛಗೊಳಿಸುವ ಕಡ್ಡಿ) ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು."رواه مسلم
ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ನಿದ್ರೆಯಿಂದ ಎದ್ದರೆ ಮೂರು ಬಾರಿ ಮೂಗಿನೊಳಗೆ ನೀರನ್ನು ಎಳೆದು ಹೊರಬಿಡಲಿ. ಏಕೆಂದರೆ ನಿಶ್ಚಯವಾಗಿಯೂ ಶೈತಾನನು ಅವರ ಮೂಗಿನ ಹೊಳ್ಳೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ."متفق عليه
ಲಖೀತ್ ಇಬ್ನ್ ಸಬಿರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಬನೂ ಮುಂತಫಿಖ್ ಗೋತ್ರದ ನಿಯೋಗಿಯಾಗಿ - ಅಥವಾ ಬನೂ ಮುಂತಫಿಖ್‌ನ ನಿಯೋಗದಲ್ಲಿ - ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದೆನು. ಅವರು (ಲಖೀತ್) ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ತಮ್ಮ ಮನೆಯಲ್ಲಿ ನಮಗೆ ಸಿಗಲಿಲ್ಲ. ನಮಗೆ ಸತ್ಯವಿಶ್ವಾಸಿಗಳ ಮಾತೆ ಆಯಿಷಾ ಸಿಕ್ಕರು. ಅವರು (ಲಖೀತ್) ಹೇಳಿದರು: ಆಗ ಅವರು ನಮಗಾಗಿ 'ಖಝೀರಾ' (ಮಾಂಸ ಮತ್ತು ಹಿಟ್ಟಿನಿಂದ ಮಾಡಿದ ಒಂದು ರೀತಿಯ ಸೂಪ್) ತಯಾರಿಸಲು ಆದೇಶಿಸಿದರು. ಅದನ್ನು ನಮಗಾಗಿ ತಯಾರಿಸಲಾಯಿತು. ಅವರು (ಲಖೀತ್) ಹೇಳಿದರು: ಮತ್ತು ನಮಗೆ ಒಂದು 'ಖಿನಾಅ್' ತರಲಾಯಿತು. 'ಖಿನಾಅ್' ಎಂದರೆ ಖರ್ಜೂರಗಳಿದ್ದ ಒಂದು ತಟ್ಟೆ. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು. ಅವರು ಹೇಳಿದರು: "ನಿಮಗೆ ಏನಾದರೂ ಸಿಕ್ಕಿತೇ? ಅಥವಾ ನಿಮಗಾಗಿ ಯಾವುದಕ್ಕಾದರೂ ಆದೇಶಿಸಲಾಗಿತ್ತೇ?" ಅವರು (ಲಖೀತ್) ಹೇಳಿದರು: ನಾವು ಹೇಳಿದೆವು: "ಹೌದು, ಓ ಅಲ್ಲಾಹನ ಸಂದೇಶವಾಹಕರೇ". ಅವರು (ಲಖೀತ್) ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಳಿತಿರುವಷ್ಟರಲ್ಲಿ ಕುರಿಗಾಹಿಯು ತನ್ನ ಕುರಿಗಳನ್ನು ಅವುಗಳ ವಿಶ್ರಾಂತಿ ಸ್ಥಳಕ್ಕೆ ಓಡಿಸಿಕೊಂಡು ಬಂದನು. ಅವನೊಂದಿಗೆ ಒಂದು ಆಡಿನ ಮರಿ ಇತ್ತು, ಅದು ಅರಚುತ್ತಿತ್ತು. ಅವರು (ಪ್ರವಾದಿ) ಕೇಳಿದರು: "ಓ ಇಂಥವನೇ, ಏನು ಹುಟ್ಟಿದೆ?" ಅವನು ಹೇಳಿದನು: "ಒಂದು ಹೆಣ್ಣು ಮರಿ". ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅದರ ಬದಲು ನಮಗಾಗಿ ಒಂದು ಕುರಿಯನ್ನು ವಧಿಸಿರಿ". ನಂತರ ಅವರು ಹೇಳಿದರು: "ನೀನು ಹೀಗೆ ಭಾವಿಸಬೇಡ" - 'ತಹ್ಸಬನ್ನ' ಎಂದು ಹೇಳಲಿಲ್ಲ - "ನಾವು ನಿನಗಾಗಿ ಇದನ್ನು ವಧಿಸಿದ್ದೇವೆ ಎಂದು. ನಮಗೆ ನೂರು ಕುರಿಗಳಿವೆ, ಅದು ಹೆಚ್ಚಾಗುವುದನ್ನು ನಾವು ಬಯಸುವುದಿಲ್ಲ. ಆದ್ದರಿಂದ, ಯಾವಾಗ ಕುರಿಗಾಹಿಯು ಒಂದು ಮರಿಯನ್ನು ತರುತ್ತಾನೋ, ನಾವು ಅದರ ಬದಲು ಒಂದು (ಬೆಳೆದ) ಕುರಿಯನ್ನು ಕಡಿಯುತ್ತೇವೆ". ಅವರು (ಲಖೀತ್) ಹೇಳಿದರು: ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ನನಗೆ ಒಬ್ಬ ಹೆಂಡತಿಯಿದ್ದಾಳೆ. ಅವಳ ನಾಲಿಗೆಯಲ್ಲಿ ಏನೋ ಇದೆ - ಅಂದರೆ, ಕೆಟ್ಟ ಮಾತು". ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅವಳಿಗೆ ವಿಚ್ಛೇದನ ನೀಡು". ಅವರು (ಲಖೀತ್) ಹೇಳಿದರು: ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಅವಳೊಂದಿಗೆ (ದೀರ್ಘಕಾಲದ) ಒಡನಾಟವಿದೆ, ಮತ್ತು ಅವಳಿಂದ ನನಗೆ ಮಕ್ಕಳಿದ್ದಾರೆ". ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅವಳಿಗೆ ಆಜ್ಞಾಪಿಸು" - ಅಂದರೆ, ಉಪದೇಶಿಸು - "ಒಂದು ವೇಳೆ ಅವಳಲ್ಲಿ ಒಳಿತಿದ್ದರೆ, ಅವಳು ಖಂಡಿತವಾಗಿಯೂ (ಹೇಳಿದಂತೆ) ಮಾಡುತ್ತಾಳೆ. ಆದರೆ ನಿನ್ನ ಚಿಕ್ಕ ದಾಸಿಯನ್ನು ಹೊಡೆಯುವಂತೆ ನಿನ್ನ ಪತ್ನಿಯನ್ನು ಹೊಡೆಯಬೇಡ". ಆಗ ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ನನಗೆ ವುಝೂವಿನ ಬಗ್ಗೆ ತಿಳಿಸಿರಿ". ಅವರು ಹೇಳಿದರು: "ವುಝೂವನ್ನು ಪೂರ್ಣವಾಗಿ ನಿರ್ವಹಿಸು, ಬೆರಳುಗಳ ನಡುವೆ ನೀರು ಹರಿಸಿ ತಿಕ್ಕು, ಮತ್ತು ನಿನಗೆ ಉಪವಾಸ ಇಲ್ಲದಿದ್ದರೆ ಮೂಗಿಗೆ ನೀರು ಹಾಕಿ ಚೆನ್ನಾಗಿ ಆಳಕ್ಕೆ ಎಳೆದುಕೊ."رواه أبو داود والترمذي والنسائي وابن ماجه
ಉಮ್ಮು ಅತಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದವರಾಗಿದ್ದರು. ಅವರು ಹೇಳಿದರು: "ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ."رواه أبو داود بهذا اللفظ ورواه البخاري بدون زيادة (بعد الطهر)
عن حذيفة رضي الله عنه مرفوعًا: «فُضِّلْنَا على الناس بِثَلاث: جُعِلَت صُفُوفَنا كصفُوف الملائِكة، وجُعلت لنَا الأرض كُلُّها مسجدا، وجُعلت تُرْبَتُهَا لنا طَهُورا، إذا لم نَجِد الماء. وذَكر خِصْلَة أُخرى».رواه مسلم
عن سمرة رضي الله عنه مرفوعاً: «من توضَّأَ يوم الجُمعة فَبِهَا ونِعْمَتْ، ومن اغْتَسَل فهو أفْضَل».رواه أبو داود والترمذي والنسائي وابن ماجه والدارمي وأحمد
عن شريح بن هانئ، قال: أتيتُ عائشة أسألها عن المسح على الخُفَّين، فقالت: عَلَيْكَ بِابْنِ أبِي طالب، فَسَلْهُ فإِنَّه كان يُسَافِرُ مع رسول الله صلى الله عليه وسلم فسألناه فقال: «جَعَلَ رسول الله صلى الله عليه وسلم ثَلَاثَةَ أَيَّامٍ وَلَيَالِيَهُنَّ للمسافر، ويوما وليلة للمُقيم».رواه مسلم
ಅಬೂ ಮಾಲಿಕ್ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ. ನಮಾಝ್ ಬೆಳಕಾಗಿದೆ, ದಾನವು ಪುರಾವೆಯಾಗಿದೆ, ತಾಳ್ಮೆಯು ಪ್ರಕಾಶವಾಗಿದೆ, ಮತ್ತು ಕುರ್‌ಆನ್ ನಿನ್ನ ಪರವಾಗಿ ಅಥವಾ ನಿನಗೆ ವಿರುದ್ಧವಾಗಿರುವ ಪುರಾವೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬೆಳಗಾಗುತ್ತಲೇ ತನ್ನ ಆತ್ಮವನ್ನು ಮಾರಾಟ ಮಾಡುತ್ತಾನೆ. ನಂತರ ಅವನು ಅದನ್ನು ಸ್ವತಂತ್ರಗೊಳಿಸುತ್ತಾನೆ ಅಥವಾ ನಾಶಗೊಳಿಸುತ್ತಾನೆ."رواه مسلم
عن سلمان الفارسي قال: قال النبي صلى الله عليه وسلم: «لا يغتسل رجلٌ يوم الجمعة، ويتطهر ما استطاع من طهر، ويدَّهنُ مِن دهنه، أو يمسُّ من طيب بيته، ثم يخرج فلا يفرِّق بين اثنين، ثم يصلي ما كُتب له، ثم ينصت إذا تكلم الإمام، إلا غُفر له ما بينه وبين الجمعة الأخرى».رواه البخاري