Hadith for the World
ಶುದ್ಧೀಕರಣ

Natural Cleanliness Practices

3 hadiths

3 hadiths

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು."متفق عليه
ಶುರೈಹ್ ಬಿನ್ ಹಾನಿಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾನು ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಏನು ಮಾಡುತ್ತಿದ್ದರು?" ಅವರು ಹೇಳಿದರು: "ಮಿಸ್ವಾಕ್ (ಹಲ್ಲುಗಳನ್ನು ಸ್ವಚ್ಛಗೊಳಿಸುವ ಕಡ್ಡಿ) ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು."رواه مسلم