Hadith for the World
Topic

ಅಕೀದಾ

135 hadiths

135 hadiths

عن أبي هريرة رضي الله عنه مرفوعًا: «إِنَّ الله تَعَالى يَقُول يَوْمَ القِيَامَة: أَيْنَ المُتَحَابُّونَ بِجَلاَلِي؟ اليَوم أُظِلُّهُم فِي ظِلِّي يَوْمَ لاَ ظِلَّ إِلاَّ ظِلِّي».رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ. ದುರ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪಾಪಕ್ಕೆ ಸಮಾನವಾದ ಪಾಪವನ್ನು ಪಡೆಯುತ್ತಾನೆ. ಅದು ಅವರ ಪಾಪಗಳಲ್ಲಿ ಏನನ್ನೂ ಕಡಿಮೆ ಮಾಡುವುದಿಲ್ಲ."رواه مسلم
ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು. ಪುನರುತ್ಥಾನ ದಿನದಂದು ಜನರಿಗೆ ಅವರ ಕರ್ಮಗಳ ಪ್ರತಿಫಲವನ್ನು ನೀಡುವಾಗ ತೋರಿಕೆಗಾಗಿ ಕೆಲಸ ಮಾಡಿದವರೊಡನೆ ಅಲ್ಲಾಹು ಹೇಳುವನು: 'ನೀವು ಇಹಲೋಕದಲ್ಲಿ ಯಾರಿಗೆ ತೋರಿಸಲು ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ಅವರಿಂದ ಏನಾದರೂ ಪ್ರತಿಫಲ ಸಿಗಬಹುದೇ ಎಂದು ನೋಡಿ."رواه أحمد
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕ್ರೈಸ್ತರು ಮರ್ಯಮರ ಮಗನನ್ನು ಮಿತಿಮೀರಿ ಪ್ರಶಂಸಿಸಿದಂತೆ ನೀವು ನನ್ನನ್ನು ಮಿತಿಮೀರಿ ಪ್ರಶಂಸಿಸಬೇಡಿ. ಏಕೆಂದರೆ ನಾನು ಅಲ್ಲಾಹನ ಒಬ್ಬ ದಾಸ ಮಾತ್ರ. ಆದ್ದರಿಂದ ನೀವು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಹೇಳಿರಿ.”رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಜನರ ಪೈಕಿ ಪುನರುತ್ಥಾನ ದಿನ ತಮ್ಮ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರು?” ಎಂದು ಕೇಳಲಾಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಓ ಅಬೂಹುರೈರ! ಹದೀಸಿನ ಬಗ್ಗೆ ತಮಗಿರುವ ಆಸಕ್ತಿಯನ್ನು ಕಂಡು ತಮಗಿಂತ ಮೊದಲು ಯಾರೂ ಈ ಹದೀಸಿನ ಬಗ್ಗೆ ಕೇಳಲಾರರು ಎಂದು ನಾನು ಭಾವಿಸಿದ್ದೆ. ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ತನ್ನ ಹೃದಯ ಮತ್ತು ಮನಸ್ಸಿನಿಂದ ನಿಷ್ಕಳಂಕವಾಗಿ ಹೇಳಿದವನು.”رواه البخاري
عن عبد الله بن عمرو بن العاص - رضي الله عنه- مرفوعاً: "مَن ردته الطِّيَرَة عن حاجته فقد أشرك، قالوا: فما كفارة ذلك؟ قال: أن تقول: اللهم لا خير إلا خيرك، ولا طَيْرَ إِلَّا طَيْرُكَ ولا إله غيرك".رواه أحمد
ಉಬಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಅವನ ದಾಸ ಮತ್ತು ಸಂದೇಶವಾಹಕರಾಗಿದ್ದಾರೆ, ಯೇಸು (ಅವರ ಮೇಲೆ ಶಾಂತಿಯಿರಲಿ) ಅಲ್ಲಾಹನ ದಾಸರು, ಸಂದೇಶವಾಹಕರು ಮತ್ತು ಅಲ್ಲಾಹು ಮರ್ಯಮರಿಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ವತಿಯ ಆತ್ಮವಾಗಿದ್ದಾರೆ, ಸ್ವರ್ಗ ಸತ್ಯವಾಗಿದೆ, ನರಕ ಸತ್ಯವಾಗಿದೆ ಎಂದು ಯಾರಾದರೂ ಸಾಕ್ಷ್ಯ ವಹಿಸಿದರೆ, ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು."متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಮಾತನ್ನು ಹೇಳಿದರು ಮತ್ತು ನಾನು ಇನ್ನೊಂದು ಮಾತನ್ನು ಹೇಳಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ನರಕವನ್ನು ಪ್ರವೇಶಿಸುವರು.” [ಬುಖಾರಿ]. ನಾನು ಹೇಳಿದೆ: "ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸದ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುವರು."متفق عليه
عن أبي هريرة رضي الله عنه مرفوعًا: «صلاة الرجل في جماعة تَضعُفُ على صلاته في بيته وفِي سُوقِه خمسا وعشرين ضِعفًا، وذلك: أَنَّه إِذَا تَوَضَّأ، فَأَحسَن الوُضُوء، ثمَّ خرج إلى المسجد لاَ يُخرِجُهُ إلاَّ الصلاة؛ لَم يَخْطُ خُطوَةً إِلاَّ رُفِعَت له بِها درجة، وَحُطَّ عَنهُ بها خطيئة، فإذا صلَّى لم تزل الملائكة تُصَلِّي عليه، ما دام في مُصَلاَّه: اللهُمَّ صَلِّ عليه، اللهم اغفِر له، اللهم ارْحَمه، ولا يزال في صلاة ما انتظر الصلاة».متفق عليه
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗಿಂತ ಮೊದಲು ಯಾರಿಗೂ ನೀಡಲಾಗಿರದ ಐದು ವಿಷಯಗಳನ್ನು ನನಗೆ ನೀಡಲಾಗಿದೆ. ಒಂದು ತಿಂಗಳ ಪ್ರಯಾಣದಷ್ಟು ದೂರದ ತನಕ ನನಗೆ ಭಯದ ಮೂಲಕ ಸಹಾಯ ಮಾಡಲಾಗಿದೆ. ನನಗೆ ಭೂಮಿಯನ್ನು ಮಸೀದಿ ಮತ್ತು ಶುದ್ಧೀಕರಣದ ವಸ್ತುವಾಗಿ ಮಾಡಿಕೊಡಲಾಗಿದೆ. ನನ್ನ ಸಮುದಾಯದ ವ್ಯಕ್ತಿಗೆ ಯಾವುದೇ ಸ್ಥಳದಲ್ಲಿ ನಮಾಝಿನ ಸಮಯವಾದರೂ ಆತ ನಮಾಝ್ ಮಾಡಬಹುದು. ನನಗೆ ಯುದ್ಧಾರ್ಜಿತ ಸೊತ್ತನ್ನು ಅನುಮತಿಸಲಾಗಿದೆ. ನನಗಿಂತ ಮೊದಲಿನ ಯಾವುದೇ ಪ್ರವಾದಿಗೂ ಇದನ್ನು ಅನುಮತಿಸಲಾಗಿರಲಿಲ್ಲ. ನನಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ನೀಡಲಾಗಿದೆ. ಇತರ ಪ್ರವಾದಿಗಳನ್ನು ವಿಶೇಷವಾಗಿ ಅವರ ಜನತೆಗೆ ಮಾತ್ರ ಕಳುಹಿಸಲಾಗುತ್ತಿತ್ತು. ಆದರೆ ನನ್ನನ್ನು ಸಂಪೂರ್ಣ ಮನುಕುಲಕ್ಕೆ ಕಳುಹಿಸಲಾಗಿದೆ."متفق عليه
عن معاذ بن جبل رضي الله عنه عن رسول الله صلى الله عليه وسلم أنه قال: «قَالَ اللهُ -عَزَّ وجَلَّ-: المُتَحَابُّون فِي جَلاَلِي، لَهُم مَنَابِرُ مِن نُورٍ يَغْبِطُهُم النَبِيُّونَ والشُهَدَاء».رواه الترمذي وأحمد
عن أبي هريرة رضي الله عنه أن رسول الله صلى الله عليه وسلم قال: «إنَّ في الجنَّة مائةَ دَرَجَة أعَدَّهَا الله للمُجاهِدين في سَبِيل الله ما بَيْنَ الدَّرَجَتَيْنِ كما بين السماء والأرض».رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅವನು ನನ್ನನ್ನು ನೆನಪಿಸಿಕೊಂಡಾಗ ನಾನು ಅವನೊಂದಿಗೆ ಇರುತ್ತೇನೆ. ಅವನು ನನ್ನನ್ನು ಮನಸ್ಸಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನನ್ನು ಒಂದು ಗುಂಪಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಅದಕ್ಕಿಂತಲೂ ಉತ್ತಮವಾದ ಗುಂಪಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನ ಕಡೆಗೆ ಒಂದು ಗೇಣಿನ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾಗುತ್ತೇನೆ. ಮತ್ತು ಅವನು ನನ್ನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಬಾವು (ಎರಡು ಕೈಗಳನ್ನು ಅಗಲಿಸಿದಾಗ ಉಂಟಾಗುವ ಅಳತೆ) ಅಂತರದಷ್ಟು ಹತ್ತಿರವಾಗುತ್ತೇನೆ. ಅವನು ನನ್ನ ಬಳಿಗೆ ನಡೆದುಕೊಂಡು ಬಂದರೆ, ನಾನು ಅವನ ಬಳಿಗೆ ಓಡುತ್ತಾ ಬರುತ್ತೇನೆ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಉದಯವಾಗುವ ದಿನಗಳಲ್ಲಿ ಅತಿಶ್ರೇಷ್ಠವಾದ ದಿನ ಜುಮಾ (ಶುಕ್ರವಾರ،) ದಿನ. ಅಂದು ಆದಮರನ್ನು ಸೃಷ್ಟಿಸಲಾಯಿತು, ಅಂದು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಯಿತು ಮತ್ತು ಅಂದು ಅವರನ್ನು ಸ್ವರ್ಗದಿಂದ ಹೊರಹಾಕಲಾಯಿತು. ಅಂತ್ಯಸಮಯವು ಶುಕ್ರವಾರವಲ್ಲದೆ ಸಂಭವಿಸುವುದಿಲ್ಲ."رواه مسلم
عن أبي هريرة رضي الله عنه عن النبي صلى الله عليه وسلم قال: «كان داود -عليه السلام- لا يأكلُ إلا من عمل يده». وعن المقدام بن معد يكرب رضي الله عنه عن النبي صلى الله عليه وسلم قال: «ما أكل أحد طعاما قط خيرا من أن يأكل من عمل يده، وإن نبي الله داود صلى الله عليه وسلم كان يأكل من عمل يده».حديث أبي هريرة رضي الله عنه: رواه البخاري. حديث المقداد رضي الله عنه: رواه البخاري
عن ابن مسعود رضي الله عنه قال: قال رسول الله صلى الله عليه وسلم : «من أصابته فَاقَة فأنْزَلها بالناس لم تُسَدَّ فَاقَتُهُ، ومن أنْزَلها بالله، فَيُوشِكُ الله له بِرزق عاجل أو آجل».رواه أبو داود والترمذي وأحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ."رواه الترمذي وأحمد
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನನಗಾಗಿ, ನನ್ನ ಸಮುದಾಯದ (ಜನರು ಮಾಡುವ) ಪ್ರಮಾದಗಳನ್ನು, ಮರೆವನ್ನು, ಮತ್ತು ಅವರು ಬಲವಂತದಿಂದ ಮಾಡಿರುವುದನ್ನು ಕ್ಷಮಿಸಿದ್ದಾನೆ."رواه ابن ماجه والبيهقي وغيرهما
عن أبي هريرة رضي الله عنه قال: سمعت رسول الله صلى الله عليه وسلم يقول: «جَعَلَ اللهُ الرحمةَ مائة جُزْءٍ، فَأَمْسَكَ عِنْدَهُ تِسْعَةً وَتِسْعِينَ، وأَنْزَلَ في الأَرْضِ جُزْءًا وَاحِدًا، فَمِنْ ذَلِكَ الجُزْءِ يَتَرَاحَمُ الخَلَائِقُ، حتى تَرْفَعَ الدَّابَّةُ حَافِرَهَا عَنْ وَلَدِهَا خَشْيَةَ أَنْ تُصِيبَهُ». وفي رواية «إِنَّ للهِ تعالى مئةُ رحمةٍ، أَنْزَلَ منها رحمةً واحدةً بَيْنَ الجِنِّ والإنسِ والبَهَائِمِ والهَوَامِّ، فَبِهَا يَتَعَاطَفُونَ، وبها يَتَرَاحَمُونَ، وبِهَا تَعْطِفُ الوَحْشُ على وَلَدِهَا، وأَخَّرَ اللهُ تعالى تِسْعًا وتِسْعِينَ رحمةً يَرْحَمُ بِهَا عِبَادَهُ يومَ القِيَامَةِ». وعن سلمان الفارسي رضي الله عنه قال: قال رسول الله صلى الله عليه وسلم : «إِنَّ للهِ تعالى مئةُ رحمةٍ فمنها رحمةٌ يَتَرَاحَمُ بها الخَلْقُ بَيْنَهُمْ، وتِسْعٌ وتِسْعُونَ لِيَومِ القِيَامَةِ». وفي رواية: «إِنَّ اللهَ تَعَالَى خَلَقَ يَوْمَ خَلَقَ السَّمَاوَاتِ والأَرْضَ مئةَ رحمةٍ كُلُّ رحمةٍ طِبَاقَ مَا بَيْنَ السَّمَاءِ إلى الأَرْضِ، فَجَعَلَ منها في الأَرْضِ رَحْمَةً فبها تَعْطِفُ الوَالِدَةُ على وَلَدِهَا، والوَحْشُ والطَّيْرُ بَعْضُهَا عَلَى بَعْضٍ، فإذا كانَ يومُ القيامةِ أَكْمَلَهَا بِهَذِه الرحمةِ».حديث أبي هريرة -رضي الله عنه-: متفق عليه. حديث سلمان -رضي الله عنه-: رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ರೂಪಗಳನ್ನು ಅಥವಾ ನಿಮ್ಮ ಆಸ್ತಿಯನ್ನು ನೋಡುವುದಿಲ್ಲ. ಬದಲಿಗೆ, ಅವನು ನಿಮ್ಮ ಹೃದಯಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ."رواه مسلم
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಓ ನನ್ನ ದಾಸರೇ! ನಾನು ಸ್ವಯಂ ನನ್ನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದೇನೆ. ಅದೇ ರೀತಿ ಅದನ್ನು ನಿಮಗೂ ನಿಷೇಧಿಸಿದ್ದೇನೆ. ಆದ್ದರಿಂದ ನೀವು ಪರಸ್ಪರ ಅನ್ಯಾಯ ಮಾಡಬೇಡಿ. ಓ ನನ್ನ ದಾಸರೇ! ನಾನು ಸನ್ಮಾರ್ಗ ತೋರಿಸಿದವರ ಹೊರತು ನೀವೆಲ್ಲರೂ ದಾರಿ ತಪ್ಪಿದವರು. ಆದ್ದರಿಂದ ನನ್ನಲ್ಲಿ ಸನ್ಮಾರ್ಗವನ್ನು ಬೇಡಿರಿ. ನಾನು ನಿಮಗೆ ಸನ್ಮಾರ್ಗ ತೋರಿಸುತ್ತೇನೆ. ಓ ನನ್ನ ದಾಸರೇ! ನಾನು ಆಹಾರ ನೀಡಿದವರ ಹೊರತು ನೀವೆಲ್ಲರೂ ಹಸಿದವರು. ಆದ್ದರಿಂದ ನನ್ನಲ್ಲಿ ಆಹಾರವನ್ನು ಬೇಡಿರಿ. ನಾನು ನಿಮಗೆ ಆಹಾರ ನೀಡುತ್ತೇನೆ. ಓ ನನ್ನ ದಾಸರೇ! ನಾನು ಬಟ್ಟೆ ಉಡಿಸಿದವರ ಹೊರತು ನೀವೆಲ್ಲರೂ ನಗ್ನರು. ಆದ್ದರಿಂದ ನನ್ನಲ್ಲಿ ಬಟ್ಟೆಯನ್ನು ಬೇಡಿರಿ. ನಾನು ನಿಮಗೆ ಬಟ್ಟೆ ಉಡಿಸುತ್ತೇನೆ. ಓ ನನ್ನ ದಾಸರೇ! ನೀವು ಹಗಲೂ-ರಾತ್ರಿ ಪಾಪ ಮಾಡುತ್ತೀರಿ. ನಾನು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತೇನೆ. ಆದ್ದರಿಂದ ನನ್ನಲ್ಲಿ ಕ್ಷಮೆಯಾಚಿಸಿರಿ. ನಾನು ನಿಮ್ಮನ್ನು ಕ್ಷಮಿಸುತ್ತೇನೆ. ಓ ನನ್ನ ದಾಸರೇ! ನನಗೆ ಯಾವುದೇ ತೊಂದರೆ ಮಾಡಲು ನಿಮಗೆ ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನನಗೆ ಯಾವುದೇ ಉಪಕಾರ ಮಾಡಲೂ ನಿಮಗೆ ಎಂದಿಗೂ ಸಾಧ್ಯವಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದೇವಭಯವುಳ್ಳವನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದುಷ್ಟನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ಒಂದೇ ಬಯಲು ಪ್ರದೇಶದಲ್ಲಿ ನಿಂತು, (ಎಲ್ಲರೂ) ನನ್ನಲ್ಲಿ ಬೇಡಿಕೆಯಿಟ್ಟು, ನಾನು ಪ್ರತಿಯೊಬ್ಬ ಮನುಷ್ಯನ ಬೇಡಿಕೆಯನ್ನು ಈಡೇರಿಸಿದರೂ, ಒಂದು ಸೂಜಿಯನ್ನು ಸಮುದ್ರಕ್ಕೆ ಚುಚ್ಚಿದರೆ (ಸಮುದ್ರದಲ್ಲಿ) ಏನು ಕಡಿಮೆಯಾಗಬಹುದೋ ಅಷ್ಟಲ್ಲದೆ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಾನು ನಿಮಗೆ ನಿಮ್ಮ ಕರ್ಮಗಳನ್ನು ಮಾತ್ರ ಎಣಿಸಿಡುತ್ತೇನೆ. ನಂತರ ಅವುಗಳಿಗೆ ಪ್ರತಿಫಲ ನೀಡುತ್ತೇನೆ. ಆದ್ದರಿಂದ ಯಾರಾದರೂ ಒಳಿತನ್ನು ಪಡೆದರೆ ಅವನು ಅಲ್ಲಾಹನನ್ನು ಸ್ತುತಿಸಲಿ. ಯಾರಾದರೂ ಅದಲ್ಲದೆ ಬೇರೇನಾದರೂ ಪಡೆದರೆ, ಅವನು ಸ್ವತಃ ಅವನನ್ನಲ್ಲದೆ ಇನ್ನಾರನ್ನೂ ದೂಷಿಸದಿರಲಿ.”رواه مسلم
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಮಗೂ! ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ಅಲ್ಲಾಹನ ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ ಯಾಚಿಸು. ತಿಳಿದುಕೋ! ನಿನಗೆ ಯಾವುದಾದರೂ ಉಪಕಾರ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನ್ನ ಪರವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ನಿನಗೆ ಏನಾದರೂ ತೊಂದರೆ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನಗೆ ವಿರುದ್ಧವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಲೇಖನಿಯನ್ನು ಎತ್ತಲಾಗಿದೆ ಮತ್ತು ಗ್ರಂಥಗಳು ಒಣಗಿವೆ."رواه الترمذي
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಅದರ ಮಸೀದಿಗಳಾಗಿವೆ, ಮತ್ತು ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಅದರ ಮಾರುಕಟ್ಟೆಗಳಾಗಿವೆ".رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಸಮುದಾಯದಲ್ಲಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವನ ಹೊರತು." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗಕ್ಕೆ ಹೋಗಲು) ನಿರಾಕರಿಸುವವನು ಯಾರು?" ಅವರು ಉತ್ತರಿಸಿದರು: "ಯಾರು ನನ್ನ ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಮತ್ತು ಯಾರು ನನ್ನ ಆಜ್ಞೆಗಳನ್ನು ಪಾಲಿಸುವುದಿಲ್ಲವೋ ಅವನು (ಸ್ವರ್ಗಕ್ಕೆ ಹೋಗಲು) ನಿರಾಕರಿಸಿದನು."رواه البخاري