1 hadiths
ಜಾಬಿರ್ ಬಿನ್ ಅಬ್ದಿಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಕುರ್ಆನ್ನ ಒಂದು ಸೂರಃವನ್ನು (ಅಧ್ಯಾಯವನ್ನು) ಕಲಿಸುವಂತೆ ಪ್ರತಿಯೊಂದು ವಿಷಯದಲ್ಲೂ ಇಸ್ತಿಖಾರ (ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ) ಮಾಡುವುದನ್ನು ಕಲಿಸುತ್ತಿದ್ದರು. ಅವರು ಹೇಳುತ್ತಿದ್ದರು: 'ನಿಮ್ಮಲ್ಲಿ ಯಾರಿಗಾದರೂ ಒಂದು ವಿಷಯವನ್ನು ಮಾಡಲು ಉದ್ದೇಶವಿದ್ದರೆ, ಅವನು ಫರ್ದ್ (ಕಡ್ಡಾಯ) ಅಲ್ಲದ ಎರಡು ರಕ್ಅತ್ ನಮಾಝ್ ಮಾಡಲಿ. ನಂತರ ಹೀಗೆ ಹೇಳಲಿ: 'ಅಲ್ಲಾಹುಮ್ಮ ಇನ್ನೀ ಅಸ್ತಖೀರುಕ ಬಿ ಇಲ್ಮಿಕ, ವ ಅಸ್ತಕ್ದಿರುಕ ಬಿ ಕುದ್ರತಿಕ, ವ ಅಸ್ಅಲುಕ ಮಿನ್ ಫದ್ಲಿಕಲ್ ಅಝೀಮ್, ಫ ಇನ್ನಕ ತಕ್ದಿರು ವಲಾ ಅಕ್ದಿರು, ವ ತಅ್ಲಮು ವಲಾ ಅಅ್ಲಮು, ವ ಅಂತ ಅಲ್ಲಾಮುಲ್ ಗುಯೂಬ್. ಅಲ್ಲಾಹುಮ್ಮ ಇನ್ ಕುಂತ ತಅ್ಲಮು ಅನ್ನ ಹಾಧಲ್ ಅಮ್ರ (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ಖೈರುನ್ ಲೀ ಫೀ ದೀನೀ, ವ ಮಆಶೀ, ವ ಆಖಿಬತಿ ಅಮ್ರೀ (ಅಥವಾ ಅವರು ಹೀಗೆ ಹೇಳಿದರು: ಆಜಿಲಿ ಅಮ್ರೀ ವ ಆಜಿಲಿಹಿ), ಫಕ್ದುರ್ಹು ಲೀ ವ ಯಸ್ಸಿರ್ಹು ಲೀ ಸುಮ್ಮ ಬಾರಿಕ್ ಲೀ ಫೀಹಿ. ವ ಇನ್ ಕುಂತ ತಅ್ಲಮು ಅನ್ನ ಹಾಧಲ್ ಅಮ್ರ ಶರ್ರುನ್ ಲೀ ಫೀ ದೀನೀ ವ ಮಆಶೀ ವ ಆಖಿಬತಿ ಅಮ್ರೀ (ಅಥವಾ ಅವರು ಹೀಗೆ ಹೇಳಿದರು: ಫೀ ಆಜಿಲಿ ಅಮ್ರೀ ವ ಆಜಿಲಿಹಿ), ಫಸ್ರಿಫ್ಹು ಅನ್ನೀ ವಸ್ರಿಫ್ನೀ ಅನ್ಹು, ವಕ್ದುರ್ ಲಿಯಲ್ ಖೈರ ಹೈಸು ಕಾನ, ಸುಮ್ಮ ಅರ್ದಿನೀ ಬಿಹಿ.' (ಅರ್ಥ: 'ಓ ಅಲ್ಲಾಹ್, ನಿನ್ನ ಜ್ಞಾನದ ಮೂಲಕ ನಾನು ನಿನ್ನಿಂದ ಮಾರ್ಗದರ್ಶನವನ್ನು ಕೋರುತ್ತೇನೆ, ನಿನ್ನ ಸಾಮರ್ಥ್ಯದ ಮೂಲಕ ನಾನು ನಿನ್ನಿಂದ ಶಕ್ತಿಯನ್ನು ಕೋರುತ್ತೇನೆ ಮತ್ತು ನಿನ್ನ ಮಹಾ ಅನುಗ್ರಹವನ್ನು ಬೇಡುತ್ತೇನೆ. ನಿಸ್ಸಂದೇಹವಾಗಿ, ನೀನು ಸಾಮರ್ಥ್ಯವುಳ್ಳವನು ಮತ್ತು ನಾನು ಸಾಮರ್ಥ್ಯಹೀನನು. ನೀನು ತಿಳಿದಿರುವವನು ಮತ್ತು ನಾನು ತಿಳಿದಿಲ್ಲದವನು, ಮತ್ತು ನೀನು ಎಲ್ಲಾ ಅಗೋಚರ ವಿಷಯಗಳನ್ನು ಬಲ್ಲವನು. ಓ ಅಲ್ಲಾಹ್, ಈ ವಿಷಯವು (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಒಳ್ಳೆಯದೆಂದು ನಿನಗೆ ತಿಳಿದಿದ್ದರೆ, ಅದನ್ನು ನನಗಾಗಿ ನಿರ್ಣಯಿಸು, ಅದನ್ನು ನನಗೆ ಸುಲಭಗೊಳಿಸು ಮತ್ತು ನಂತರ ಅದರಲ್ಲಿ ನನಗೆ ಸಮೃದ್ಧಿಯನ್ನು ನೀಡು. ಮತ್ತು ಈ ವಿಷಯವು ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಕೆಟ್ಟದ್ದೆಂದು ನಿನಗೆ ತಿಳಿದಿದ್ದರೆ, ಅದನ್ನು ನನ್ನಿಂದ ದೂರ ಮಾಡು ಮತ್ತು ನನ್ನನ್ನು ಅದರಿಂದ ದೂರ ಮಾಡು. ಒಳಿತು ಎಲ್ಲೇ ಇದ್ದರೂ ಅದನ್ನು ನನಗಾಗಿ ನಿರ್ಣಯಿಸು, ಮತ್ತು ನಂತರ ಅದರಿಂದ ನನ್ನನ್ನು ತೃಪ್ತಿಪಡಿಸು.')" ಅವರು (ಜಾಬಿರ್) ಹೇಳಿದರು: "ಮತ್ತು ಅವನು ತನ್ನ ಅಗತ್ಯವನ್ನು ಹೆಸರಿಸಬೇಕು."رواه البخاري