Hadith for the World
Jihad

Manners of Jihad

4 hadiths

4 hadiths

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'."متفق عليه
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿನ ಒಂದು ಯುದ್ಧದಲ್ಲಿ ಒಬ್ಬ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು.متفق عليه
عن عبد الله بن أبي أوفى رضي الله عنه أَنَّ رسول الله صلى الله عليه وسلم فِي بَعْض أَيَّامه التي لَقِي فيها العدو انتظر، حتى إذا مَالَتِ الشمس قام فِيهم، فقال: «أَيُّها الناس، لا تَتَمَنَّوْا لِقَاء الْعَدُوِّ، وَاسْأَلوا الله الْعافية فَإِذا لَقِيتموهم فَاصْبِرُوا، وَاعلموا أَنَّ الْجَنَّة تحت ظِلال السُّيوف ثُمَّ قَال النَّبِي صلى الله عليه وسلم: اللهمَّ مُنزِلَ الْكتاب، وَمُجْرِيَ السَّحاب، وَهازم الأَحْزاب: اهْزِمهم، وَانصُرنا علَيهم».متفق عليه
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌರ್ಯಕ್ಕಾಗಿ ಹೋರಾಡುವ, ಕೋಮುವಾದಕ್ಕಾಗಿ ಹೋರಾಡುವ, ಮತ್ತು ತೋರಿಕೆಗಾಗಿ ಹೋರಾಡುವ ವ್ಯಕ್ತಿಯ ಬಗ್ಗೆ—ಇವರಲ್ಲಿ ಅಲ್ಲಾಹನ ಮಾರ್ಗದಲ್ಲಿರುವವರು ಯಾರು? ಎಂದು ಕೇಳಲಾಯಿತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು."متفق عليه