Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 62 languages
«ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ. ಅವು: ಹಣೆ"—ಇದನ್ನು ಹೇಳುವಾಗ ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು—"ಕೈಗಳು, ಮೊಣಕಾಲುಗಳು ಮತ್ತು ಪಾದಗಳ ತುದಿಗಳು. ಮತ್ತು ಬಟ್ಟೆ ಹಾಗೂ ಕೂದಲನ್ನು ಮಡಚಬಾರದೆಂದು ಕೂಡ ಆಜ್ಞಾಪಿಸಲಾಗಿದೆ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಮಾಝ್ ಮಾಡುವಾಗ ದೇಹದ ಏಳು ಅಂಗಗಳ ಮೇಲೆ ಸಾಷ್ಟಾಂಗ ಮಾಡಲು ಅಲ್ಲಾಹು ಅವರಿಗೆ ಆಜ್ಞಾಪಿಸಿದ್ದಾನೆ. ಅವು: ಮೊದಲನೆಯದು: ಹಣೆ. ಅಂದರೆ ಮೂಗು ಮತ್ತು ಕಣ್ಣುಗಳ ಮೇಲ್ಭಾಗದಲ್ಲಿರುವ ಮುಖದ ಭಾಗ. ಆ ಏಳು ಅಂಗಗಳಲ್ಲಿ ಹಣೆ ಮತ್ತು ಮೂಗು ಒಂದೇ ಅಂಗವೆಂದು ತಿಳಿಸಲು ಮತ್ತು ಸಾಷ್ಟಾಂಗವೆರಗುವ ವ್ಯಕ್ತಿಯು ಎರಡರಿಂದಲೂ ನೆಲವನ್ನು ಸ್ಪರ್ಶಿಸಬೇಕೆಂದು ಒತ್ತಿಹೇಳಲು, ಅವರು ತಮ್ಮ ಕೈಯಿಂದ ಮೂಗಿನ ಕಡೆಗೆ ತೋರಿಸಿದರು. ಎರಡನೇ ಮತ್ತು ಮೂರನೇ ಅಂಗ: ಎರಡು ಕೈಗಳು. ನಾಲ್ಕನೇ ಮತ್ತು ಐದನೇ ಅಂಗ: ಎರಡು ಮೊಣಕಾಲುಗಳು. ಆರನೇ ಮತ್ತು ಏಳನೇ ಅಂಗ: ಪಾದಗಳ ಬೆರಳುಗಳು. ಮಾತ್ರವಲ್ಲದೆ, ಸಾಷ್ಟಾಂಗ ಮಾಡುವಾಗ ನಮ್ಮ ಕೂದಲು ಅಥವಾ ಬಟ್ಟೆಗಳು ಕೆಳಗೆ ಜೋತು ಬೀಳದಂತೆ ಅವುಗಳನ್ನು ಕಟ್ಟುವುದು ಅಥವಾ ಮಡಚುವುದು ಮಾಡಬಾರದೆಂದು ನಮಗೆ ಆಜ್ಞಾಪಿಸಲಾಗಿದೆ. ಬದಲಿಗೆ, ಇತರ ಅಂಗಗಳೊಂದಿಗೆ ಅವು ಕೂಡ ಸಾಷ್ಟಾಂಗ ಮಾಡುವಂತಾಗಲು ಅವುಗಳನ್ನು ನೆಲಕ್ಕೆ ಬೀಳುವಂತೆ ಬಿಟ್ಟು ಬಿಡಬೇಕು.

Source
متفق عليه
Download image

Saved at original quality