Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಪ್ರಾರ್ಥಿಸುತ್ತಿದ್ದರು:

Available in 46 languages
«ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಪ್ರಾರ್ಥಿಸುತ್ತಿದ್ದರು: "ಅಲ್ಲಾಹುಮ್ಮ ಇನ್ನೀ ಅಸ್ಅಲುಕಲ್ ಹುದಾ ವತ್ತುಖಾ ವಲ್-ಅಫಾಫ ವಲ್-ಗಿನಾ". (ಅರ್ಥ: ಓ ಅಲ್ಲಾಹ್, ಖಂಡಿತವಾಗಿಯೂ ನಾನು ನಿನ್ನಲ್ಲಿ ಮಾರ್ಗದರ್ಶನ, ದೇವಭಯ, ಪಾವಿತ್ರ್ಯ ಮತ್ತು ಸ್ವಾವಲಂಬನೆಯನ್ನು ಬೇಡುತ್ತೇನೆ.)»

Meaning translation ·

Explanation

The meaning in a few plain lines

ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥನೆಗಳಲ್ಲಿ ಇದೂ ಒಂದಾಗಿತ್ತು: "ಓ ಅಲ್ಲಾಹ್, ಖಂಡಿತವಾಗಿಯೂ ನಾನು ನಿನ್ನಲ್ಲಿ ಮಾರ್ಗದರ್ಶನವನ್ನು ಬೇಡುತ್ತೇನೆ" ಅಂದರೆ ಸತ್ಯವನ್ನು ಅರಿಯುವುದು ಮತ್ತು ಅದರಂತೆ ನಡೆಯುವ ನೇರವಾದ ಮಾರ್ಗ, "ಆರಾಧ್ಯನ ಭಯವನ್ನು" ಅಂದರೆ ಆದೇಶಗಳನ್ನು ಪಾಲಿಸುವುದು ಮತ್ತು ನಿಷೇಧಗಳಿಂದ ದೂರವಿರುವುದನ್ನು, "ಪಾವಿತ್ರ್ಯವನ್ನು" ಅಂದರೆ ಮಾತು ಅಥವಾ ಕೃತ್ಯದಲ್ಲಿ ಯಾವುದು ಹಲಾಲ್ (ಧರ್ಮಸಮ್ಮತ) ಅಲ್ಲವೋ ಮತ್ತು ಯಾವುದು ಹೊಂದಿಕೊಳ್ಳುವುದಿಲ್ಲವೋ ಅದರಿಂದ ದೂರವಿರುವುದು, "ಸ್ವಾವಲಂಬನೆಯನ್ನು" ಅಂದರೆ ಸೃಷ್ಟಿಗಳನ್ನು ಅವಲಂಬಿಸದಿರುವುದನ್ನು. ಅಂದರೆ ಅಲ್ಲಾಹುವಿನ ಹೊರತು ಬೇರೆ ಯಾರೊಬ್ಬರ ಅಗತ್ಯವೂ ಇಲ್ಲದಂತಾಗುವುದು.

Source
رواه مسلم
Download image

Saved at original quality