Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 62 languages
«ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ಮುಸಲ್ಮಾನನಿಗೆ ಆಯಾಸ, ಅನಾರೋಗ್ಯ, ಆತಂಕ, ದುಃಖ, ಹಾನಿ, ಸಂಕಟ ಮುಂತಾದ ಯಾವುದೇ ಸಂಭವಿಸಿದರೂ, ಎಲ್ಲಿಯವರೆಗೆಂದರೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಸಹ, ಅದಕ್ಕೆ ಪರಿಹಾರವಾಗಿ ಅಲ್ಲಾಹು ಅವನ ಕೆಲವು ಪಾಪಗಳನ್ನು ಅಳಿಸದೆ ಇರುವುದಿಲ್ಲ.”»

Meaning translation ·

Explanation

The meaning in a few plain lines

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮುಸಲ್ಮಾನರಿಗೆ ಸಂಭವಿಸುವ ರೋಗಗಳು, ಚಿಂತೆಗಳು, ದುಃಖಗಳು, ಕಷ್ಟಗಳು ಮತ್ತು ತೊಂದರೆಗಳು—ಅದು ಕೇವಲ ಮುಳ್ಳು ಚುಚ್ಚಿ ಉಂಟಾಗುವ ನೋವಾದರೂ ಸಹ—ಅವು ಅವರ ಪಾಪಗಳನ್ನು ಪರಿಹರಿಸುತ್ತವೆ ಮತ್ತು ಅವರ ದುಷ್ಕೃತ್ಯಗಳನ್ನು ಅಳಿಸುತ್ತವೆ.

Source
متفق عليه
Download image

Saved at original quality