Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 59 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ." ಅವರೊಡನೆ ಕೇಳಲಾಯಿತು: “ಓ ಅಲ್ಲಾಹನ ಸಂದೇಶವಾಹಕರೇ! ಯಾರು?" ಅವರು ಉತ್ತರಿಸಿದರು: "ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿಯೂ ಸ್ವರ್ಗವನ್ನು ಪ್ರವೇಶಿಸಲಾಗದವನು."»

Meaning translation ·

Explanation

The meaning in a few plain lines

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅವಮಾನ ಮತ್ತು ತಿರಸ್ಕಾರದಿಂದ—ಎಲ್ಲಿಯವರೆಗೆಂದರೆ ಆತ ತನ್ನ ಮೂಗನ್ನು ಮಣ್ಣಿಗೆ ತಾಗಿಸುವಂತಾಗುವ ತನಕ—ಪ್ರಾರ್ಥಿಸಿದರು. ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಆಗ ಅವರೊಡನೆ ಕೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಯಾರ ವಿರುದ್ಧವಾಗಿ ಪ್ರಾರ್ಥಿಸಿದಿರೋ ಆ ವ್ಯಕ್ತಿ ಯಾರು?" ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿ, ಅವರ ಕಾರಣದಿಂದ ಸ್ವರ್ಗವನ್ನು ಪ್ರವೇಶಿಸಲಾಗದವನು. ಅಂದರೆ, ಅವರಿಗೆ ಒಳಿತು ಮಾಡದ ಮತ್ತು ಅವರಿಗೆ ಅವಿಧೇಯತೆ ತೋರಿದ ಕಾರಣದಿಂದ ಅವನಿಗೆ ಸ್ವರ್ಗ ಪ್ರವೇಶಿಸಲಾಗಲಿಲ್ಲ.

Source
رواه مسلم
Download image

Saved at original quality