Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 71 languages
«ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”»

Meaning translation ·

Explanation

The meaning in a few plain lines

ಮಾರಾಟ ಮಾಡುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರುವ ವ್ಯಕ್ತಿಗೆ ದಯೆ ತೋರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುತ್ತಾರೆ. ಆದ್ದರಿಂದ ಬೆಲೆಯ ವಿಷಯದಲ್ಲಿ ಗ್ರಾಹಕನೊಂದಿಗೆ ಕಠೋರವಾಗಿ ವರ್ತಿಸಬಾರದು, ಉತ್ತಮ ಗುಣದಿಂದ ವ್ಯವಹರಿಸಬೇಕು. ಖರೀದಿಸುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಜಿಪುಣತನ ತೋರಬಾರದು ಮತ್ತು ವಸ್ತುವಿನ ಮೌಲ್ಯಕ್ಕಿಂತ ಕಡಿಮೆ ಹಣ ಕೊಡಬಾರದು. ಸಾಲ ಮರುಪಾವತಿಯನ್ನು ಕೇಳುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಬಡವರು ಮತ್ತು ಕಷ್ಟದಲ್ಲಿರುವವರನ್ನು ಸತಾಯಿಸಬಾರದು. ಬದಲಿಗೆ, ಮೃದುವಾಗಿ ಸೌಮ್ಯವಾಗಿ ಕೇಳಬೇಕು. ಕಷ್ಟದಲ್ಲಿರುವವರಿಗೆ ಮರುಪಾವತಿಗಾಗಿ ಸಮಯವನ್ನು ಹೆಚ್ಚಿಸಬೇಕು.

Source
رواه البخاري
Download image

Saved at original quality